Urdu   /   English   /   Nawayathi

ಐಎಂಎ ವಂಚಕ ಮನ್ಸೂರ್ ಖಾನ್ ವಿರುದ್ಧ ಬ್ಲೂ ಕಾರ್ನರ್‌ ನೋಟೀಸ್‌ ಜಾರಿ

share with us

ಬೆಂಗಳೂರು: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಸಾವಿರಾರು ಕೋಟಿ ವಂಚನೆ ನಡೆಸಿ ದುಬೈಗೆ ಪರಾರಿಯಾಗಿರುವ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ವಿರುದ್ಧ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟೀಸ್‌ (ಬಿಸಿಎನ್) ಹೊರಡಿಸಿದೆ. ಎಸ್‌ಐಟಿ ಕೋರಿಕೆಯ ಆಧಾರದ ಮೇಲೆ, ಕೇಂದ್ರ ತನಿಖಾ ವಿಭಾಗದ ಇಂಟರ್‌ಪೋಲ್ ವಿಭಾಗವು ಜೂನ್ 8 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪರಾರಿಯಾಗಿದ್ದಾನೆ ಎನ್ನಲಾದ ಮನ್ಸೂರ್ ವಿರುದ್ಧ ಬಿಸಿಎನ್ ಹೊರಡಿಸಿದೆ. ಕ್ರಿಮಿನಲ್ ತನಿಖೆಗೆ ಅಗತ್ಯವಾಗಿರುವ  ವ್ಯಕ್ತಿಯನ್ನು ಪತ್ತೆಹಚ್ಚಲು, ಗುರುತಿಸಲು ಅಥವಾ ವ್ಬಶಕ್ಕೆ ಪಡೆಯಲು ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗುತ್ತದೆ. "ಇಂಟರ್ಪೋಲ್ ನೋಟಿಸ್ ನಂತರ ಮನ್ಸೂರ್ ಪಾಸ್‌ಪೋರ್ಟ್‌ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ..ಅವರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವುದು ಕಷ್ಟಕರವಾಗಿದೆ" ಎಂದು ಅಧಿಕೃತ ಮೂಲವೊಂದು ತಿಳಿಸಿದೆ. ಏತನ್ಮಧ್ಯೆ, ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕಂಪನಿಯ 13 ನಿರ್ದೇಶಕರನ್ನು ವಿಚಾರಣೆ ನಡೆಸಿದ ನಂತರ, ಐಎಂಎ ಹಗರಣದಲ್ಲಿ ಎಸ್‌ಐಟಿಗೆ ಕೆಲವು ಉತ್ತಮ ಸಾಕ್ಷಿಗಳು ದೊರಕಿದೆ.ಎಂದು ತಿಳಿದುಬಂದಿದೆ. 35 ಸಾವಿರಕ್ಕೆ ಹೆಚ್ಚು ಜನರಿಂದ ಎರಡು ಸಾವಿರ ಕೋಟಿ ಸಂಗ್ರಹಿಸಿದ್ದ ಮನ್ಸೂರ್‌ ಖಾನ್‌ ಮಾಲೀಕತ್ವದ ಐಎಂಎ ಜ್ಯುವೆಲ್ಸ್‌ ಈಗ ಖಾಯಂ ಆಗಿ ಮುಚ್ಚಿದೆ.ಹೂಡಿಕೆ ಮಾಡಿದ್ದ ಸಾವಿರಾರು ಮಂದಿ ಪೋಲೀಸರಿಗೆ ದೂರು ನೀಡಿದ್ದು ಎಸ್‌ಐಟಿ ಪೊಲೀಸರು ಆರೋಪಿಯ ಪತ್ತೆಗೆ ಶತಪ್ರಯತ್ನ ನಡೆಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا