Urdu   /   English   /   Nawayathi

ಸಿಕ್ಕಿಂನ ಉತ್ತರ ಭಾಗದಲ್ಲಿ ಮೇಘಸ್ಫೋಟ : 427 ಪ್ರವಾಸಿಗರ ರಕ್ಷಣೆ

share with us

ಗ್ಯಾಂಗ್ಟಕ್: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಈಶಾನ್ಯ ರಾಜ್ಯ ಸಿಕ್ಕಿಂನ ಉತ್ತರ ಭಾಗದಲ್ಲಿ ಮೇಘಸ್ಫೋಟ, ಧಾರಾಕಾರ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಅಪಾಯಕ್ಕೆ ಸಿಲುಕಿದ್ದ 427 ಪ್ರವಾಸಿಗರನ್ನು ರಕ್ಷಿಸಲಾಗಿದೆ. ಸುಂದರ ಗಿರಿಧಾಮ ಚಾಂಗ್‍ತಂಗ್‍ನಲ್ಲಿ ಮೇಘಸ್ಫೋಟ ಸಂಭವಿಸಿ ಭಾರೀ ಮಳೆ ಸುರಿಯಿತು. ಕಳೆದ ನಾಲ್ಕು ದಿನಗಳಿಂದ ಲುಚಿನೋ-ಜೀಮೊ ಪ್ರದೇಶಗಳ ನಡುವೆ ರಸ್ತೆಯಲ್ಲಿ 60ಕ್ಕೂ ಹೆಚ್ಚು ವಾಹನಗಳು ಅತಂತ್ರ ಸ್ಥಿತಿಯಲ್ಲಿ ಸಿಲುಕಿ ಪ್ರಯಾಣಿಕರು ತೀವ್ರ ತೊಂದರೆಗೀಡಾಗಿದ್ದರು. ಭಾರೀ ಮಳೆಯಿಂದ ಕೆಲವೆಡೆ ಭೂಕುಸಿತ ಸಂಭವಿಸಿ ರಸ್ತೆಗೆ ಹಾನಿಯಾಗಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ಧಕ್ಕೆಯಾಗಿತ್ತು. ಸಿಕ್ಕಿಂ ಸರ್ಕಾರ ಕಾರ್ಯೋನ್ಮುಖವಾಗಿ ಸಂತ್ರಸ್ತ ಪ್ರದೇಶಗಳಿಂದ 427 ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಿ ರಾಜಧಾನಿ ಗ್ಯಾಂಗ್ಟಕ್‍ಗೆ ಕರೆತಂದಿದೆ. ರಕ್ಷಿತ ಪ್ರಯಾಣಿಕರಲ್ಲಿ ಅನೇಕರಿಗೆ ನೀರು, ಆಹಾರವಿಲ್ಲದೆ ನಿತ್ರಾಣರಾಗಿದ್ದು, ಅವರಿಗೆ ಅನ್ನಾಹಾರಗಳನ್ನು ನೀಡಿ ಪ್ರಾಥಮಿಕ ಚಿಕಿತ್ಸೆ ಮೂಲಕ ಉಪಚರಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ, ಸಂ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا