Urdu   /   English   /   Nawayathi

ಎರ್ನಾಕುಲಂ ಬಂದರಿನಿಂದ ತೆರಳಿದ್ದ 243 ಜನರಿದ್ದ ಹಡಗು ನಾಪತ್ತೆ..!

share with us

ಎರ್ನಾಕುಲಂ/ನವದೆಹಲಿ: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಐದು ತಿಂಗಳ ಹಿಂದೆ ಕೇರಳದ ಎರ್ನಾಕುಲಂ ಬಂದರಿನಿಂದ ತೆರಳಿದ್ದ 243 ಪ್ರಯಾಣಿಕರಿದ್ದ ಹಡಗು ನಿಗೂಢವಾಗಿ ನಾಪತ್ತೆಯಾಗಿದೆ. ಆ ನೌಕೆಯ ಬಗ್ಗೆ ಈವರೆಗೆ ಯಾವುದೇ ನಿಖರ ಮಾಹಿತಿ ಲಭಿಸಿಲ್ಲ. ಇದನ್ನು ಪತ್ತೆ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಫೆಸಿಫಿಕ್ ರಾಷ್ಟ್ರಗಳ ನೆರವು ಕೋರಿದೆ. ಜ.12ರಂದು ಎರ್ನಾಕುಲಂ ಬಂದರಿನಿಂದ ದೇವಮಾತಾ-2 ಎಂಬ ಹೆಸರಿನ ನೌಕೆ ಫೆಸಿಫಿಕ್ ರಾಷ್ಟ್ರಗಳತ್ತ ಪ್ರಯಾಣ ಬೆಳೆಸಿತ್ತು. ಆದರೆ ಆ ನೌಕೆ ಭಾರತದ ಸಾಗರಗಡಿ ಪ್ರದೇಶ ದಾಟಿದ ನಂತರ ಸಂಪರ್ಕ ಕಳೆದುಕೊಂಡಿತ್ತು. ಹಡಗಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಕಳೆದ ಐದು ತಿಂಗಳಿನಿಂದ ಕೇರಳ ಮತ್ತು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮುಂದುವರೆಸಿದ್ದರೂ ಯಾವುದೇ ಸುಳಿವು ಲಭಿಸಿಲ್ಲ. ನಾವು ಈಗಾಗಲೇ ಫೆಸಿಫಿಕ್ ಸಾಗರದ ರಾಷ್ಟ್ರಗಳಿಗೆ ನೌಕೆ ನಾಪತ್ತೆ ಬಗ್ಗೆ ತಿಳಿಸಿ ಅಗತ್ಯ ನೆರವು ಕೋರಿದ್ದೇವೆ. ಆ ದೇಶಗಳಿಂದ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರವೀಶ್‍ಕುಮಾರ್ ವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ನೌಕೆಯಲ್ಲಿ ಸಿಬ್ಬಂದಿ ಸೇರಿದಂತೆ 243 ಮಂದಿ ಇದ್ದರು. ಫೆಸಿಫಿಕ್ ಸಾಗರದ ವಿವಿಧ ದೇಶಗಳಿಗೆ ಇವರು ಪ್ರಯಾಣ ಬೆಳೆಸಿದ್ದರು. ಆದರೆ ನಾಪತ್ತೆಯಾದ ನೌಕೆ ಬಗ್ಗೆ ಇವರಿಗೆ ಯಾವುದೇ ಸುಳಿವು ಲಭಿಸಿಲ್ಲದಿರುವುದರಿಂದ ಪ್ರಯಾಣಿಕರ ಕುಟುಂಬದವರು ಕಂಗಾಲಾಗಿದ್ದು , ಕೇರಳ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا