Urdu   /   English   /   Nawayathi

ತಲ್ಲಣಗೊಂಡ ಪಂಜಾಬ್! ಜೈಲಿನಲ್ಲೇ ಕೈದಿಗಳಿಂದ ಹಿಂಸಾಚಾರದ ಆರೋಪಿ ಕೊಲೆ...

share with us

ಚಂಡಿಗಢ: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) 2015ರ ಬರ್ಗಾರಿ ಹಿಂಸಾಚಾರದ ಪ್ರಮುಖ ಆರೋಪಿಯನ್ನು ಜೈಲಿನಲ್ಲೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಹಿನ್ನೆಲೆ ಪೊಲೀಸ್​ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ.

View image on Twitter

ANI✔@ANI

Patiala Range IG AS Rai on death of Mohinder Pal Singh Bittoo, main accused in Bargari sacrilege cases after a fight with inmates at New Nabha Jail: People who are responsible for it have been arrested. FIR has been registered, further investigation will be done. (22-06)

39

6:03 AM - Jun 23, 2019

See ANI's other Tweets

Twitter Ads info and privacy

ನಭ ಕಾರಾಗೃಹದಲ್ಲಿದ್ದ ಆರೋಪಿ ಮಹಿಂದರ್​ಪಾಲ್ (49) ಬಿಟ್ಟು ಮೇಲೆ ಇಬ್ಬರು ಕೈದಿಗಳು ನಿನ್ನೆ ಸಂಜೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದವನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಆತ ಮೃತಪಟ್ಟಿದ್ದನು. ಇದರಿಂದ ಜೈಲಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​ ಮಾಡಿದ್ದಾರೆ.

ಬಿಟ್ಟು ಮೇಲೆ ಗುರ್ಸೇವಾಕ್ ಸಿಂಗ್ ಹಾಗೂ ಮನಿಂದರ್ ಸಿಂಗ್ ಎಂಬ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇಬ್ಬರೂ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು.

ಪಂಜಾಬ್ ಸಿಎಂ ಕ್ಯಾಪ್ಟನ್‌ ಅಮರೀಂದರ್​ ಸಿಂಗ್ ಅವರು ಪ್ರಕರಣದ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ. ಹತ್ಯೆ ಮಾಡಿದರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆಯೂ ತಿಳಿಸಿದ್ದಾರೆ. ಜೈಲ್​ ಸಚಿವ ಸುಖ್ಜಿಂದರ್​ ಸಿಂಗ್ ರಂಧಾವ ಅವರು, ಇಬ್ಬರು ಕಾರಾಗೃಹ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಕಾರಾಗೃಹದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ರೋಹಿತ್​ ಚೌಧರಿ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ರಚಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا