Urdu   /   English   /   Nawayathi

ದಯಾಮರಣಕ್ಕೆ ಅನುಮತಿ ನೀಡಿ... ಅಧಿಕಾರಿಗಳಿಗೆ ಪತ್ರ ಬರೆದ ವಿದ್ಯಾರ್ಥಿನಿ!

share with us

ಭದ್ರಾಕ್(ಒಡಿಶಾ): 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಜೀವನ ನಮಗೆ ಎಲ್ಲ ರೀತಿಯ ಪಾಠ ಕಲಿಸುತ್ತದೆ. ಎಲ್ಲವೂ ಸರಿ ಇರುವಾಗಲೇ ಇಂತಹ ಅಹಿತಕರ ಘಟನೆ ನಡೆದು ಹೋಗುತ್ತವೆ. ಆ ವಿದ್ಯಾರ್ಥಿನಿ ಶಾಲೆ ಮುಗಿಸಿಕೊಂಡು ಸ್ನೇಹಿತರೊಂದಿಗೆ ಮನೆಗೆ ಹಿಂದುರುಗುತ್ತಿದ್ದ ವೇಳೆ ದುರ್ಘಟನೆವೊಂದು ನಡೆದು ಹೋಗಿದ್ದು, ಇದೀಗ ತನಗೆ ದಯಾಮರಣ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾಳೆ. ಜುಲೈ 19,2018ರಂದು ಶಾಲೆ ಮುಗಿಸಿಕೊಂಡು ತನ್ನ ಅಕ್ಕ ಹಾಗೂ ಕೆಲವು ಸ್ನೇಹಿತರೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್​ ಅವರ ಮೇಲೆ ಹರಿದಿತ್ತು. ಈ ವೇಳೆ ಅಕ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಶೀತಲ್​ ತನ್ನ ಎಡಗೈ ಹಾಗೂ ಬಲಗಾಲು ಕಳೆದುಕೊಳ್ಳಬೇಕಾಯಿತು.ಸ್ವತಃ ಬಲದ ಮೇಲೆ ಯಾವುದೇ ಕೆಲಸ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದೀಗ ದಯಾಮರಣಕ್ಕಾಗಿ ಅನುಮತಿ ನೀಡಿ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ಶೀತಲ್​ ಗಂಭೀರವಾಗಿ ಗಾಯಗೊಂಡಿದ್ದರಿಂದ ಆ ವೇಳೆ ಸರ್ಕಾರ ಅನೇಕ ಭರವಸೆ ನೀಡಿತ್ತು. ಆದರೆ ಇದೀಗ ಆಕೆಯನ್ನ ಮರೆತು ಬಿಟ್ಟಿದ್ದು, ಯಾವುದೇ ಸಹಾಯ ನೀಡದ ಕಾರಣ ಕುಟುಂಬಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯ ಇಲ್ಲದಂತಾಗಿದೆ. ಹೀಗಾಗಿ ಭರವಸೆ ಕಳೆದುಕೊಂಡಿರುವ ಶೀತಲ್​ ತನಗೆ ದಯಾಮರಣ ನೀಡಲು ಕೋರಿದ್ದಾಳೆ. 2018ರ ಮಾರ್ಚ್​ ರಂದು ಸುಪ್ರೀಂಕೋರ್ಟ್​​ ದಯಾಮರಣಕ್ಕಾಗಿ ಅನುಮತಿ ನೀಡುವ ಐತಿಹಾಸಿಕ ಕಾನೂನು ಜಾರಿಗೊಳಿಸಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا