Urdu   /   English   /   Nawayathi

ನ್ಯಾಯಾಲಯದಲ್ಲೇ ಕುಸಿದು ಬಿದ್ದು ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನಿಧನ

share with us

ಕೈರೋ: 18 ಜೂನ್ 2019 (ಫಿಕ್ರೋಖಬರ್ ಸುದ್ದಿ) 2013ರಲ್ಲಿ ಸೇನೆಯಿಂದ ಉಚ್ಚಾಟಿಸಲ್ಪಟ್ಟ ಈಜಿಪ್ಟ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ(67) ನ್ಯಾಯಾಲಯದ ವಿಚಾರಣೆ ವೇಳೆ ಕೋರ್ಟ್ ನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ಬೇಹುಗಾರಿಕೆ ಆರೋಪ ಎದುರಿಸುತ್ತಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. "ಅವರು ನ್ಯಾಯಾಧೀಶರ ಮುಂದೆ ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿದ್ದಾರೆ. ನಂತರ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಬದುಕುಳಿಯಲಿಲ್ಲ" ಮಾದ್ಯಮಗಳು ವರದಿ ಮಾಡಿದೆ. ಈಜಿಪ್ಟ್ ಸರ್ವಾಧಿಕಾರಿಯಾಗಿದ್ದ ಹುಸ್ನಿ ಮುಬಾರಕ್ ನ ಮೂರು ದಶಕಗಳ ಕಾಲದ ಆಡಳಿತ ಅಂತ್ಯವಾದ ನಂತರ ದೇಶದ ಮೊದಲ ಪ್ರಜಾಸತ್ತಾತ್ಮಕ ಚುನಾಯಿತ ನಾಯಕನಾಗಿ ಅಧಿಕಾರ ವಹ್ಗಿಸಿಕೊಂಡಿದ್ದ ಮೊರ್ಸಿ ೨೦೧೨-೧೩ರ ಅವಧಿಯಲ್ಲಿ ಆ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸುಮಾರು ಒಂದು ವರ್ಷದ ತರುವಾಯ ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ ಹಾಗೂ ಸೇನಾ ದಂಗೆಯ ನಂತರ ಮೊರ್ಸಿ ತಮ್ಮ ಸ್ಥಾನದಿಂದ ಉಚ್ಚಾಟಿತರಾಗಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا