Urdu   /   English   /   Nawayathi

ಕಳ್ಳನ ಬಂಧನ: 2.75 ಲಕ್ಷ ರೂ ಮೌಲ್ಯದ ಕಳವು ಸಾಮಾಗ್ರಿ ವಶ

share with us

ತುಮಕೂರು: 16 ಜೂನ್ 2019 (ಫಿಕ್ರೋಖಬರ್ ಸುದ್ದಿ) ಕೈಗಾರಿಕೆ ಒಂದರಲ್ಲಿ ಬೆಲೆಬಾಳುವ ಸಾಮಗ್ರಿಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಮಾಲು ಸಮೇತ ಹೊಸ ಬಡಾವಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಆರೋಪಿ ಶಿವಾಜಿ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನಿಂದ 2.75 ಲಕ್ಷ ರು ಬೆಲೆ ಬಾಳುವ ಸೂಪರ್ ಫ್ಯಾಕ್ಟರಿಯ ಡ್ರೈ ಸೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಜೂನ್ 2 ರಂದು ವಿದ್ಯಾ ನಗರದ ಇಂಡಸ್ಟ್ರಿಯಲ್ಲಿ ಏರಿಯಾದಲ್ಲಿರುವ ಟೈಸನ್ ಹೆಲ್ತ್ ಕೇರ್ ಸೋಪ್ ಫ್ಯಾಕ್ಟರಿಯಲ್ಲಿ ಕಿಟಕಿ ಸರಳನ್ನು ಮುರಿದು ಕಳವು ಮಾಡಿದ್ದನು. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا