Urdu   /   English   /   Nawayathi

2004ರಲ್ಲಿ ಪ್ರಾರಂಭಿಸಿದ ತೊಕ್ಕೊಟ್ಟು ಮೇಲ್ಸೇತುವೆ ಲೋಕಾರ್ಪಣೆ

share with us

ಮಂಗಳೂರು: 13 ಜೂನ್ 2019 (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ತೊಕ್ಕೊಟ್ಟುವಿನಲ್ಲಿ ನಿರ್ಮಾಣಗೊಂಡ ಚತುಷ್ಪಥ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್​ ಇಂದು ಬೆಳಗ್ಗೆ ಲೋಕಾರ್ಪಣೆಗೊಳಿಸಿದರು. ಎಂಟು ವರ್ಷಗಳ ಹಿಂದೆ ನವಯುಗ ಕಂಪನಿ ಗುತ್ತಿಗೆ ವಹಿಸಿಕೊಂಡಿದ್ದ ಈ ತೊಕ್ಕೊಟ್ಟು ಮೇಲ್ಸೇತುವೆಯ ಕಾಮಗಾರಿ ಹಲವಾರು ಕಾರಣಗಳಿಂದ ಕುಂಟುತ್ತಾ ಸಾಗಿತ್ತು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಅವರ ವಿರುದ್ಧ ಹೇಳಿಕೆಗಳು, ಟೀಕೆಗಳು ಕೇಳಿ ಬಂದಿದ್ದವು. ಲೋಕಸಭಾ ಚುನಾವಣೆಯ ಬಳಿಕ ಮೇಲ್ಸೇತುವೆ ಕಾಮಗಾರಿ ತೀವ್ರ ವೇಗ ಪಡೆದು ಈಗ ಸಂಚಾರ ಮುಕ್ತವಾಗಿದೆ. ಮಂಗಳೂರು-ಕೊಣಜೆ, ಮಂಗಳೂರು-ಉಳ್ಳಾಲ, ಮಂಗಳೂರು-ಕಾಸರಗೋಡು ರಸ್ತೆಗಳು ಪರಸ್ಪರ ಒಟ್ಟು ಸೇರುವ ತೊಕ್ಕೊಟ್ಟು ಜಂಕ್ಷನ್ ಪ್ರದೇಶದಲ್ಲಿ ಈ ಮೇಲ್ಸೇತುವೆ ನಿರ್ಮಾಣಗೊಂಡಿದೆ. ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, 2004ರಿಂದ ಈ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿದ್ದು, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ಕಾಮಗಾರಿ ಅನುಮೋದನೆಗೊಂಡಿತ್ತು. ಕಾಶ್ಮೀರದಿಂದ ಕನ್ಯಾಕುಮಾರಿ, ಕಚ್​ನಿಂದ ಕಾಮರೂಪದವರೆಗೆ ರಸ್ತೆಗಳ ಅಭಿವೃದ್ಧಿಯಾಗಬೇಕು ಎನ್ನುವ ಯೋಜನೆಯಡಿಯಲ್ಲಿ ಈ ಮೇಲ್ಸೇತುವೆಯ ಕಾಮಗಾರಿಯೂ ಬಂತು. ಯುಪಿಎ ಸರ್ಕಾರದ ಕಾಲದಲ್ಲಿ ಇದರ ಟೆಂಡರ್ ಪ್ರಕ್ರಿಯೆ ಆರಂಭವಾಯಿತು. ಬಿಒಟಿ ಆಧಾರದಲ್ಲಿ ನವಯುಗ ಸಂಸ್ಥೆಗೆ ಇದರ ಕಾಮಗಾರಿ ದೊರೆಯಿತು. ಇದರಲ್ಲಿ ತಾಂತ್ರಿಕ ತೊಂದರೆ, ಕಾನೂನು ಸಮರಗಳು ಸಾಕಷ್ಟು ನಡೆದವು. ಆದರೆ ತೊಕ್ಕೊಟ್ಟು ಮತ್ತು ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಬಹಳ ಕುಂಟುತ್ತಾ ಸಾಗಿತ್ತು. ಬಹಳ ಟೀಕೆಗೂ ಒಳಗಾಯಿತು ಎಂದು ಹೇಳಿದರು. ಈ ಸಂದರ್ಭ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಶೆಟ್ಟಿ ಬೊಳಿಯಾರ್, ಮಾಜಿ‌ ಶಾಸಕ ಜಯರಾಮ ಶೆಟ್ಟಿ, ಮುಖಂಡರಾದ ಚಂದ್ರಹಾಸ ಉಚ್ಚಿಲ್, ಚಂದ್ರಹಾಸ ಉಳ್ಳಾಲ್, ಮನೋಜ್ ಆಚಾರ್ಯ, ಸತೀಶ್ ಕುಂಪಲ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا