Urdu   /   English   /   Nawayathi

ಸಿದ್ದಾಪುರ | ಶೂನಲ್ಲಿ ಹಾವು, ತಪ್ಪಿದ ಅನಾಹುತ

share with us

ಸಿದ್ದಾಪುರ: 12 ಜೂನ್ 2019 (ಫಿಕ್ರೋಖಬರ್ ಸುದ್ದಿ) ಶಾಲೆಗೆ ತೆರಳಲೆಂದು ಶೂ ಧರಿಸಲು ಮುಂದಾದ ಸಂದರ್ಭ ಶೂ ಒಳಗೆ ವಿಷಕಾರಿ ಹಾವೊಂದು ಕಂಡು ವಿದ್ಯಾರ್ಥಿನಿ ಬೆಚ್ಚಿಬಿದ್ದ ಘಟನೆ ಇಲ್ಲಿಯ ಮೈಸೂರು ರಸ್ತೆಯಲ್ಲಿ ನಡೆದಿದೆ. ಶಂಶುದ್ದೀನ್ ಅವರ ಪುತ್ರಿ ಎಂದಿನಂತೆ ಶಾಲೆಗೆ ಹೊರಡಲು ಸಿದ್ಧವಾಗಿ ಮನೆಯ ಮುಂಭಾಗ ಇಟ್ಟಿದ್ದ ತನ್ನ ಶೂ ತೆಗೆಯಲು ಹೋದಾಗ ಅದರಲ್ಲಿದ್ದ ಹಾವನ್ನು ಕಂಡು ಕಿರುಚಿದ್ದಾಳೆ. ತಂದೆ ಹಾಗೂ ಇತರರು ತಕ್ಷಣ ಬಂದು ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಬಾಲಕಿಯ ‌ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ. ಮಳೆಗಾಲವಾಗಿದ್ದರಿಂದ ಹಾವು ಹಾಗೂ ವಿಷ ಜಂತುಗಳು ರಾತ್ರಿ ವೇಳೆ ಮನೆಯ ಬಳಿಗೆ ಬೆಚ್ಚನೆಯ ಜಾಗಕ್ಕೆ ಬಂದು ಸೇರುವುದರಿಂದ ಬೆಳಿಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದು ಶಂಶುದ್ದೀನ್ ಹೇಳಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا