Urdu   /   English   /   Nawayathi

ಕೈಗಾರಿಕೆಯಲ್ಲಿ ಬಾಯ್ಲರ್ ಸ್ಫೋಟ: ಮಾಧ್ಯಮ ಸಿಬ್ಬಂದಿ ಮೇಲೆ ಹಲ್ಲೆ, ಬಂಧನ

share with us

ತುಮಕೂರು: 12 ಜೂನ್ 2019 (ಫಿಕ್ರೋಖಬರ್ ಸುದ್ದಿ)  ಸುದ್ದಿ ಮಾಡಲು ತೆರಳಿದ್ದ ನಾಲ್ವರು ಮಾಧ್ಯಮ ಪ್ರತಿನಿಧಿಗಳ ಮೇಲೆ ಕೈಗಾರಿಕೆಯೊಂದರ ಸಿಬ್ಬಂದಿ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ತುಮಕೂರು ಹೊರವಲಯದ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಬೇಳೂರು ಬಯೋಟೆಕ್​ ಲಿ. ಕಂಪನಿ ಬಳಿ ವರದಿಗೆ ತೆರಳಿದ್ದ ಇಬ್ಬರು ಕ್ಯಾಮರಾಮೆನ್ ಹಾಗೂ ಇಬ್ಬರು ವರದಿಗಾರರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಕ್ಯಾಮರಾ ಕಸಿದುಕೊಂಡ ಕೈಗಾರಿಕೆ ಸಿಬ್ಬಂದಿ, ಚಿತ್ರೀಕರಣದ ವೇಳೆ ಬಳಸುವ ಟ್ರೈಪಾಡ್ ಮುರಿದು ಹಾಕಿದ್ದಾರೆ.ಖಾಸಗಿ ವಾಹಿನಿಯ ಕ್ಯಾಮರಾಮೆನ್ ದೇವರಾಜ್ ಎಂಬುವರ ತಲೆ ಹಾಗೂ ಕಾಲಿಗೆ ಟ್ರೈಪಾಡ್​ನಿಂದ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ತುಮಕೂರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಕ್ಯಾಮರಾಮನ್​ ಚಂದನ್​ ಹಾಗೂ ವರದಿಗಾರರಾದ ಮಂಜುನಾಥ್ ನಾಯ್ಕ್ ಮತ್ತು ಮಹೇಶ್​ ಎಂಬುವರಿಗೂ ಗಾಯಗಳಾಗಿವೆ.

ಘಟನೆಯ ಹಿನ್ನೆಲೆ

ಎರಡು ದಿನಗಳ ಹಿಂದೆ ಕೈಗಾರಿಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಎರಡು ಬಾಯ್ಲರ್​ಗಳು ಸ್ಪೋಟಗೊಂಡಿದ್ದವು. ಇದರಿಂದ ಸಮೀಪದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿತ್ತು. ಈ ಕುರಿತು ಸುದ್ದಿ‌ಮಾಡಲು ಹೋದಾಗ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮೀಣ ಪೋಲೀಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا