Urdu   /   English   /   Nawayathi

ದಾಳಿಗೆ ಬಂದ ಹುಲಿಯನ್ನೇ ಬೆದರಿಸಿ ಓಡಿಸಿದ ಕಾಡೆಮ್ಮೆ: ಮೈ ಜುಂ ಎನ್ನಿಸುವ ವಿಡಿಯೋ!

share with us

ಮೈಸೂರು: 12 ಜೂನ್ 2019 (ಫಿಕ್ರೋಖಬರ್ ಸುದ್ದಿ) ಯಾರೇ ಆಗಲಿ ಧೈರ್ಯದಿಂದ ನಿಂತರೆ ಎದುರಾಳಿ ಎಷ್ಟೇ ಬಲಿಷ್ಠನಾಗಿದ್ದರೂ ಮಂಡಿಯೂರಲೇಬೇಕು ಎಂಬ ಮಾತು ಪ್ರಾಣಿ ಸಂಕುಲದಲ್ಲಿಯೂ ಸಾಬೀತಾಗಿದೆ. ಕಾಡೆಮ್ಮೆಯ ಶೌರ್ಯ ಕಂಡು ಹುಲಿಯೇ ಹೆದರಿ ಕಾಲ್ಕಿತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ವಲಯ ಎ ಜೋನ್‌ನಲ್ಲಿ ಪ್ರವಾಸಿಗರು ಸಫಾರಿಗೆ ಹೋಗಿದ್ದ ವೇಳೆ ಈ ರೋಚಕ ದೃಶ್ಯ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.ವಿಡಿಯೋದಲ್ಲಿರುವಂತೆ, ಮೈದಾನದಲ್ಲಿ ಕಾಡೆಮ್ಮೆ ಹಿಂಡು ಮೇಯುತ್ತಿರುವುದನ್ನು ಗಮನಿಸಿದ ಹುಲಿ, ನಿಧಾನವಾಗಿ ಹೆಜ್ಜೆ ಹಾಕುತ್ತ ದಾಳಿಗೆ ಹೊಂಚು ಹಾಕುತ್ತಿರುತ್ತದೆ. ಅಷ್ಟರಲ್ಲಾಗಲೇ ಎಚ್ಚೆತ್ತ ಕಾಡೆಮ್ಮೆ ಹಿಂಡು ಹುಲಿ ಘರ್ಜನೆಗೆ ತಬ್ಬಿಬ್ಬುಗೊಂಡು ಓಡುತ್ತದೆ. ಆದರೆ ಅಲ್ಲಿಯೇ ಇದ್ದ ಮತ್ತೊಂದು ಕಾಡೆಮ್ಮೆಯ ಧೈರ್ಯ ಎಂತದ್ದು ಎಂದು ಊಹಿಸಲೂ ಆಗದು. ಎದೆ ಬಗೆದು ರಕ್ತ ಕುಡಿಯುವ ಹುಲಿ ಎದುರು ಕೊಂಚವೂ ಹೆದರದೆ ನಿಲ್ಲುತ್ತದೆ. ಅಲ್ಲದೆ, ಹುಲಿಯನ್ನೇ ಅಟ್ಟಾಡಿಸಿಕೊಂಡು ಹೋಗುತ್ತದೆ. ಇಲ್ಲಿ ನನಗೆ ಉಳಿಗಾಲವಿಲ್ಲ ಎಂದರಿತ ಹುಲಿ ಅಲ್ಲಿಂದ ಓಡಿ ಹೋಗುತ್ತದೆ. ಕಾಡೆಮ್ಮೆ ಮತ್ತೆ ತನ್ನ ಬಳಗ ಸೇರಿಕೊಳ್ಳುತ್ತದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا