Urdu   /   English   /   Nawayathi

ಐಎಂಎ ಅವ್ಯವಹಾರ: 8 ತಿಂಗಳ ಹಿಂದೆಯೇ ಪಬ್ಲಿಕ್ ನೊಟೀಸ್ ಪ್ರಕಟಿಸಿದ್ದರೂ ಜನ ಮೋಸ ಹೋದ್ರು!

share with us

ಬೆಂಗಳೂರು: 12 ಜೂನ್ 2019 (ಫಿಕ್ರೋಖಬರ್ ಸುದ್ದಿ) ಐಎಂಎ ಕಂಪನಿ ಅವ್ಯವಹಾರ ಸಂಬಂಧ 8 ತಿಂಗಳ ಮೊದಲೇ‌ ಸರ್ಕಾರಕ್ಕೆ ಮಾಹಿತಿ ಇತ್ತು ಎಂಬ ವಿಚಾರ ಬಯಲಾಗಿದೆ. ಆರ್​​ಬಿಐ ನಿಯಮಾವಳಿ ಪಾಲಿಸದ ಐಎಂಎ ಕಂಪನಿ ವಿರುದ್ಧ 8 ತಿಂಗಳ ಹಿಂದೆಯೇ ಹೂಡಿಕೆದಾರರಿಗೆ ಪಬ್ಲಿಕ್ ನೊಟೀಸ್ ನೀಡುವ ಮೂಲಕ ಎಚ್ಚರಿಸಿತ್ತು. 2018ರ ನವಂಬರ್ 20 ರಂದು ಪಬ್ಲಿಕ್ ನೋಟಿಸ್ ಹೊರಡಿಸಿದ್ದ ಸರ್ಕಾರ ಐಎಂಎ ಎಂಬ ಕಂಪನಿ ಹೂಡಿಕೆದಾರರಿಂದ ನಿಯಮಬಾಹಿರವಾಗಿ ಹಣ ಸಂಗ್ರಹಿಸುತ್ತಿರುವುದಾಗಿ ಅವ್ಯವಹಾರದ ಕುರಿತು ಬೆಂಗಳೂರು ಉತ್ತರ ತಹಶಿಲ್ದಾರಿಂದ ಪಬ್ಲಿಕ್ ನೊಟೀಸ್​ ಹೊರಡಿಸಲಾಗಿತ್ತು ಎಂದು ತಿಳಿದುಬಂದಿದೆ.

ima

ಐಎಂಎ ಅವ್ಯವಹಾರ ಸಂಬಂಧ 8 ತಿಂಗಳ ಹಿಂದೆಯೇ ಸರ್ಕಾರದಿಂದ ಪಬ್ಲಿಕ್ ನೊಟೀಸ್: ಆರ್​​ಬಿಐ ಮಾಹಿತಿ ಹಿನ್ನೆಲೆ 2018 ರ ಜುಲೈನಲ್ಲಿ ರಾಜ್ಯ ಮಟ್ಟದ ಸಮನ್ವಯ ಸಮಿತಿ ರಾಜ್ಯ ಮುಖ್ಯಕಾರ್ಯದರ್ಶಿ, ಅರ್​ಬಿಐನ ರಾಜ್ಯದ ಮುಖ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ ಸಭೆ ಸೇರಿ ನಿಯಮಬಾಹಿರವಾಗಿ ಹಣ ಸಂಗ್ರಹಿಸುತ್ತಿರುವ ಕಂಪನಿ ವಿರುದ್ಧ ಸಿಐಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನೆಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದರು. ಇಷ್ಟಾದರೂ ಹೂಡಿಕೆದಾರರು ಎಚ್ಚೆತ್ತುಕೊಳ್ಳದೆ ಮೋಸ ಹೋಗಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا