Urdu   /   English   /   Nawayathi

ಛೀ...! ವರದಿಗೆ ತೆರಳಿದ ಪತ್ರಕರ್ತನ ಬಾಯಿಗೆ ಮೂತ್ರ ಬಿಟ್ಟ ಪೊಲೀಸರು..!

share with us

ಶಮ್ಲಿ(ಉತ್ತರ ಪ್ರದೇಶ): 12 ಜೂನ್ 2019 (ಫಿಕ್ರೋಖಬರ್ ಸುದ್ದಿ) ವರದಿಗಾಗಿ ತೆರಳಿದ್ದ ಪತ್ರಕರ್ತನೊಬ್ಬನಿಗೆ ಮಾರಣಾಂತಿಕವಾಗಿ ಹೊಡೆದು, ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ಉತ್ತರ ಪ್ರದೇಶದ ಶಮ್ಲಿಯಲ್ಲಿ ನಡೆದಿದೆ. ಶಮ್ಲಿ ಸಮೀಪದ ಧಿಮಾನ್ಪುರದಲ್ಲಿ ರೈಲೊಂದು ಹಳಿತಪ್ಪಿತ್ತು. ಇದರ ವರದಿ ಹಾಗೂ ಚಿತ್ರೀಕರಣಕ್ಕಾಗಿ ಪತ್ರಕರ್ತನೊಬ್ಬ ತೆರಳಿದ್ದ. ಜನಸಾಮಾನ್ಯರ ಉಡುಪಿನಲ್ಲಿದ್ದ ರೈಲ್ವೇ ಪೊಲೀಸರು ಕ್ಯಾಮರಾ ಕಿತ್ತುಕೊಂಡು ಮನಬಂದಂತೆ ಥಳಿಸಿದ್ದಾರೆ ಎಂದು ಪತ್ರಕರ್ತ ಅಳಲು ತೋಡಿಕೊಂಡಿದ್ದಾನೆ.

ANI UP@ANINewsUP

Shamli: GRP personnel thrash a journalist who was covering the goods train derailment near Dhimanpura tonight. He says, "They were in plain clothes. One hit my camera&it fell down. When I picked it up they hit&abused me. I was locked up, stripped&they urinated in my mouth"

3,229

1:47 AM - Jun 12, 2019

3,370 people are talking about this

Twitter Ads info and privacy

"ಮೊದಲಿಗೆ ಓರ್ವ ಪೊಲೀಸ್ ಹೊಡೆದಿದ್ದಾನೆ. ಈ ವೇಳೆ ನನ್ನ ಬಳಿಯಿದ್ದ ಕ್ಯಾಮರಾ ನೆಲಕ್ಕೆ ಬಿತ್ತು. ಇದನ್ನು ತೆಗೆಯಲೆತ್ನಿಸಿದ ಸಂದರ್ಭದಲ್ಲಿ ಎಲ್ಲರೂ ಹೊಡೆಯಲು ಶುರು ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಎಲ್ಲರೂ ಸೇರಿ ನನ್ನನ್ನು ಸುತ್ತುವರಿದರು. ನನ್ನ ಬಟ್ಟೆಯನ್ನು ಹರಿದು, ಬಾಯಿಯನ್ನು ಬಲವಂತವಾಗಿ ತೆರೆದು ಮೂತ್ರ ಮಾಡಿದರು" ಎಂದು ಪತ್ರಕರ್ತ ಘಟನೆಯನ್ನು ವಿವರಿಸಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈಲ್ವೇ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಸ್ಟೇಷನ್ ಹೌಸ್ ಆಫೀಸರ್ ರಾಕೇಶ್ ಕುಮಾರ್, ಕಾನ್ಸ್​​ಟೇಬಲ್ ಸುನಿಲ್ ಕುಮಾರ್​ ಅವರನ್ನು ಸದ್ಯ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا