Urdu   /   English   /   Nawayathi

ಜಸ್ಟ್​​ 48 ಗಂಟೆ 31 ಮಕ್ಕಳು ಬಲಿ... 100ಕ್ಕೂ ಹೆಚ್ಚು ಕಂದಮ್ಮಗಳ ಜೀವ ಆ ಪರಮಾತ್ಮನ ಕೈಯಲ್ಲಿ!

share with us

ಮುಜಾಫರ್​ಪುರ್​​(ಬಿಹಾರ್​): 12 ಜೂನ್ 2019 (ಫಿಕ್ರೋಖಬರ್ ಸುದ್ದಿ)ಕೆಲ ತಾಯಿಯರು ಆ ದೇವರಿಗೆ ಶಾಪ ಹಾಕುತ್ತಿದ್ದರೆ, ಇನ್ನು ಕೆಲ ತಾಯಿಯಂದಿರು ನನ್ನ ಮಕ್ಕಳನ್ನು ಬದುಕಿಸು ದೇವರೇ ಎಂದು ಮೊರೆ ಹೋಗುತ್ತಿದ್ದಾರೆ. ಏಕೆಂದ್ರೆ ಆ ಮಕ್ಕಳು ಅರಳುವ ಮುನ್ನವೇ ಬಾಡಿ ಹೋಗುತ್ತಿವೆ. ಹೌದು, ಕೇವಲ 48 ಗಂಟೆಗಳಲ್ಲಿ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಎಂಬ ಮಿದುಳು ಸಂಬಂಧಿ ರೋಗಕ್ಕೆ 31 ಮಕ್ಕಳು ಸಾವನ್ನಪ್ಪಿದ ಘಟನೆ ಬಿಹಾರದ ಮುಜಾಫರ್‌ಪುರ್​ನಲ್ಲಿ ನಡೆದಿದೆ.

View image on Twitter

ANI✔@ANI

Bihar: 31 children have died in Muzaffarpur reportedly due to Acute Encephalitis Syndrome (AES). Sunil Shahi, Superintendent SKMCH, Muzaffarpur, says, “From Jan to June 2, 13 patients were admitted, of them 3 died. From June 2 to this day 86 people were admitted,of them 31 died".

92

10:07 AM - Jun 12, 2019

62 people are talking about this

Twitter Ads info and privacy

ಇಲ್ಲಿನ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಸ್​ಕೆಎಂಸಿಎಚ್​) ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಸಂಬಂಧಿತ ರೋಗದಿಂದ ಬಳಲುತ್ತಿದ್ದ ನೂರಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದರು. ಇದರಲ್ಲಿ 31 ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಎಸ್​ಕೆಎಂಸಿಎಚ್​ ಅಧೀಕ್ಷಕ ಮಾತನಾಡಿ, ಮಿದುಳು ಸಂಬಂಧಿ ರೋಗ ಉಲ್ಬಣಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ನೂರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚು ಮಕ್ಕಳು ಪೊಗ್ಲೈಸಿಮಿಯಾ (ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ರೋಗದ ತೀವ್ರತೆ ಹೆಚ್ಚಾಗಿ 31 ಮಕ್ಕಳು ಮೃತಪಟ್ಟಿವೆ. ಕೆಲವು ರೋಗಿಗಳಲ್ಲಿ ಜ್ವರದ ತೀವ್ರತೆ ಅಧಿಕವಾಗುತ್ತಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 2012ರ ಜೂನ್​ನಲ್ಲಿ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಪಾಟ್ನಾದಲ್ಲಿ ಉಲ್ಬಣಿಸಿ ಮೂರೇ ದಿನದಲ್ಲಿ 109ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು. ರೋಗ ವ್ಯಾಪಿಸಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮಕ್ಕಳನ್ನು ಕಳೆದುಕೊಂಡ ತಾಯಿಯಂದಿರು ದೇವರಿಗೆ ಶಪಿಸುತ್ತಿದ್ರೆ, ನನ್ನ ಮಕ್ಕಳನ್ನು ಬದುಕಿಸಿ ಕೊಡಿ ದೇವಾ ಎಂದು ಇನ್ನು ಕೆಲ ತಾಯಂದಿರು ದೇವರ ಮೊರೆ ಹೋಗಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا