Urdu   /   English   /   Nawayathi

159 ಸಂಸದರ ಮೇಲೆ ಗಂಭೀರ ಆಪಾದನೆ! ಕಮಲ,ಕೈ ಪಕ್ಷದ ಪಾಲು ಹೆಚ್ಚು!

share with us

ನವದೆಹಲಿ: 26 ಮೇ 2019 (ಫಿಕ್ರೋಖಬರ್ ಸುದ್ದಿ) 17ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಸಂಸತ್​ ಪ್ರವೇಶಿಸಿರುವ 542 ಸಂಸದರ ಪೈಕಿ 159 (ಶೇ 29ರಷ್ಟು) ಸದಸ್ಯರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ನ್ಯಾಷನಲ್​ ಎಲೆಕ್ಷನ್​ ವಾಚ್​ ಹಾಗೂ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ವಿಶ್ಲೇಷಿಸಿ ವರದಿ ಮಾಡಿವೆ.ವರದಿಯ ಅನ್ವಯ, 233 ಸಂಸದರು ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ 10 ವಿಜೇತ ಅಭ್ಯರ್ಥಿಗಳು ಅಪರಾಧ ಕೃತ್ಯ ಎಸಗಿದ್ದಾರೆ ಎಂದು ನ್ಯೂ ಹಾಗೂ ಎಡಿಆರ್ ತಿಳಿಸಿವೆ.

criminal cases

ಅಪರಾಧ ಹಿನ್ನೆಲೆಯ ವಿವರ(3 ಅವಧಿಯ ಮಾಹಿತಿ)

ಬಿಜೆಪಿಯ ಐವರು ಸಂಸದರಾದ ಜಗದಾಂಬಿಕಾ ಪಾಲ್, ಮನೋಜ್ ಕಿಶೋರ್​ ಭಾಯಿ ಕೊಟಾಕ್, ಕೈಲಾಶ್ ಚೌಧರಿ, ಛಟಾರ್ ಸಿಂಗ್ ದರ್ಬಾರ್ ಮತ್ತು ರಾಜ್​ ಬಹದ್ದೂರ್ ಸಿಂಗ್; ಕಾಂಗ್ರೆಸ್​ನ ಡೀನ್ ಕುರಿಯಕೋಸ್, ಟಿ.ಎನ್. ಪ್ರತಾಪನ್, ಕೆ. ಸುಧಾಕರನ್ ಮತ್ತು ವಿ.ಕೆ. ಶ್ರೀಕಾಂಡನ್; ವೈಎಸ್ಆರ್ ಕಾಂಗ್ರೆಸ್ ಪಕ್ಷ ತಾಲಾರಿ ರಂಗಯ್ಯ ಅವರು ಅಪರಾಧದ ಬಗ್ಗೆ ಮಾಹಿತಿ ನೀಡಿಲ್ಲ. ಇದರಲ್ಲಿ ಕನಿಷ್ಠ 11 ಸಂಸದರ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಅವರಲ್ಲಿ ಬಿಜೆಪಿಯ ಹೊರೆನ್ ಸಿಂಗ್ ಬೇ, ನಿಸೀತ್ ಪ್ರಮಾನಿಕ್, ಅಜಯ್ ಕುಮಾರ್, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಛಟಾರ್ ಸಿಂಗ್ ದರ್ಬಾ. ಕಾಂಗ್ರೆಸ್​​ನ ಅತುಲ್ ಕುಮಾರ್ ಸಿಂಗ್ ಮತ್ತು ಅಫ್ಝಲ್ ಅನ್ಸಾರಿ. ಬಿಎಸ್​ಪಿಯ ಅದಿರ್ ರಂಜನ್ ಚೌಧರಿ (ಕಾಂಗ್ರೆಸ್), ಉದಯರಾಜ್ ಬೋಂಸ್ಲೆ ( ರಾಷ್ಟ್ರೀಯ ಕಾಂಗ್ರೆಸ್). ವೈಎಸ್​ಆರ್​ ಕಾಂಗ್ರೆಸ್​​ನ ಕುರುವ ಗೋರಂತಲ ಮಾಧವ್ ಹಾಗೂ ಸ್ವತಂತ್ರ ಅಭ್ಯರ್ಥಿ ನಬಾ ಕುಮಾರ್ ಸರನಿಯಾ ಇದ್ದಾರೆ. ಪಕ್ಷವಾರು ಪ್ರಕರಣಗಳಲ್ಲಿ ಬಿಜೆಪಿಯ 87, ಕಾಂಗ್ರೆಸ್​​ನ 19, ಜೆಡಿಯುನ 8, ಡಿಎಂಕೆನ 6 ಹಾಗೂ ಟಿಎಂಸಿಯ 4 ಸಂಸದರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا