Urdu   /   English   /   Nawayathi

ಪ್ರಧಾನಿ ಮೋದಿ ಭೇಟಿಯಾದ ಜಗನ್‌ ; ಪರಸ್ಪರ ಅಭಿನಂದನೆ

share with us

ಹೊಸದಿಲ್ಲಿ: 26 ಮೇ 2019 (ಫಿಕ್ರೋಖಬರ್ ಸುದ್ದಿ) ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕ ಜಗನ್‌ ಮೋಹನ್‌ ರೆಡ್ಡಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಲೋಕಮಾನ್ಯ ರಸ್ತೆಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಉಭಯ ನಾಯಕರು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.ಚುನಾವಣೆಯ ಅಭೂತಪೂರ್ವ ಗೆಲುವಿಗಾಗಿ ಇಬ್ಬರೂ ಪರಸ್ಪರ ಅಭಿನಂದಿಸಿದರು. ಜಗನ್‌ ಅವರು ಪ್ರಧಾನಿ ಅವರಿಗೆ ಹೂಗುಚ್ಛದೊಂದಿಗೆ ಶಾಲೊಂದನ್ನು ಹೊದೆಸಿದರು. ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಪ್ರಧಾನಿ ಅವರನ್ನು ಜಗನ್‌ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವುದು ಜಗನ್‌ ಅವರ ಪ್ರಣಾಳಿಕೆಯ ಮೊದಲ ಅಂಶವಾಗಿತ್ತು. ಆಂಧ್ರದ 175 ಸದಸ್ಯ ಬಲದ ವಿಧಾನಸಭೆಯಲ್ಲಿ ಜಗನ್‌ ನೇತೃತ್ವದ ವೈಎಸ್‌ಆರ್‌ ಪಕ್ಷ 151 ಸೀಟು ಗಳನ್ನು ಗೆದ್ದು ಅಧಿಕಾರ ಹಿಡಿದಿದೆ. 25 ಲೋಕಸಭಾ ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಗೆದ್ದುಕೊಂಡಿತ್ತು. ವಿಜಯವಾಡಾದಲ್ಲಿ ಮೇ 30 ರಂದು ಜಗನ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا