Urdu   /   English   /   Nawayathi

ಸರ್ಕಲ್ ಇನ್ಸ್ ಪೆಕ್ಟರ್ ಈಗ ಸಂಸದ, ಮೇಲಾಧಿಕಾರಿಯಿಂದ ಸೆಲ್ಯೂಟ್ ಸ್ವೀಕರಿಸುತ್ತಿರುವ ಪೋಟೋ ವೈರಲ್

share with us

ಹೈದ್ರಾಬಾದ್: 26 ಮೇ 2019 (ಫಿಕ್ರೋಖಬರ್ ಸುದ್ದಿ) ಹಿರಿಯ ಪೊಲೀಸ್   ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ಆಂಧ್ರ ಪ್ರದೇಶದ ಸರ್ಕಲ್ ಇನ್ಸ್ ಪೆಕ್ಟರ್ ಜಿ. ಮಾಧವ್ ಈಗ  ಸಂಸದರಾಗಿ ಆಯ್ಕೆಯಾಗುವ ಮೂಲಕ ಅದೇ ಪೊಲೀಸ್ ಅಧಿಕಾರಿಗಳು ತನಗೆ ಸೆಲ್ಯೂಟ್ ಹೊಡೆಯುವಂತೆ ಮಾಡಿದ್ದಾರೆ. ಆಂಧ್ರದ ಸರ್ಕಲ್ ಇನ್ಸ್ ಪೆಕ್ಟರ್ ಗೋರಂಟ್ಲಿ ಮಾಧವ್ , ಅನಂತಪುರ ಜಿಲ್ಲೆಯ ಹಿಂದೂಪೂರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹಳೆಯ ಬಾಸ್  ಸಿಐಡಿ ಉಪ ಪೊಲೀಸ್ ಮಹಾ ನಿರ್ದೇಶಕ ಮೆಹಬೂಬಾ ಪಾಷ, ನೂತನ ಸಂಸದರಿಗೆ ಸೆಲ್ಯೂಟ್ ಹೊಡೆಯುತ್ತಿರುವ ಪೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಸಿಬ್ಬಂದಿಗಳೊಂದಿಗೆ ಇರುವ ಪಾಶಾ ಮತ್ತು ಮಾಧವ್ ನಗುತ್ತಾ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ವೈಸ್ ಆರ್ ಸಿಪಿ ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದ ಕದ್ರಿ ಮಾಜಿ ಸರ್ಕಲ್ ಇನ್ಸ್ ಪೆಕ್ಟರ್ ಮಾಧವ್, ತೆಲುಗು ದೇಶಂ ಪಕ್ಷದ ಸಂಸದ ಕೃಷ್ಟಾಪ್ಪ ನಿಮ್ಮಾಲಾ ವಿರುದ್ಧ 1 ಲಕ್ಷದ 40 ಸಾವಿರದ 748 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವೈರಲ್ ಆಗಿರುವ ಪೋಟೋ ಬಗ್ಗೆ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಧವ್, ಮೊದಲು ತನ್ನ ಹಳೆಯ ಬಾಸ್ ಗೆ ಸಲ್ಯೂಟ್ ಹೊಡೆದೆ. ಅವರಿಗೆ ಗೌರವ ನೀಡುತ್ತೇನೆ. ನಂತರ ಅವರು ಕೂಡಾ ನನಗೆ ಸೆಲ್ಯೂಟ್ ಮಾಡಿದ್ದಾರೆ. ಇದು ಪರಸ್ಪರ ಗೌರವ ನೀಡುವುದಾಗಿದೆ ಎಂದು ಹೇಳಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا