Urdu   /   English   /   Nawayathi

ಮಂಡ್ಯ: ಸುಮಲತಾ ಅಂಬರೀಷ್ ಜಯಭೇರಿ,ನಿಖಿಲ್ ಎಲ್ಲೀದ್ದಿಯಪ್ಪಾ? ಬಿಜೆಪಿ ವ್ಯಂಗ್ಯ

share with us

ಮಂಡ್ಯ: 23 ಮೇ 2019 (ಫಿಕ್ರೋಖಬರ್ ಸುದ್ದಿ) ಲೋಕಸಭಾ ಚುನಾವಣೆ ಆರಂಭದಿಂದಲೂ ರಾಷ್ಟ್ರಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಸುಮಾರು 90 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜೊತೆಗೆ ಆರಂಭದಿಂದಲೂ ತೀವ್ರ ಪೈಪೋಟಿ ನೀಡಿದ ಸುಮಲತಾ ಅಂಬರೀಷ್ ಕೊನೆಗೆ ಗೆಲುವಿನ ಜಯಮಾಲೆ ಹಾಕಿಕೊಂಡಿದ್ದಾರೆ. ಈ ಗೆಲುವಿನಿಂದಾಗಿ ಸುಮಲತಾ ಅಂಬರೀಷ್ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ಸಂತಸಗೊಂಡಿದ್ದು, ಜೆಡಿಎಸ್ ವಿರುದ್ಧ ವ್ಯಂಗ್ಯವಾಡುತ್ತಿದ್ದಾರೆ.ಪ್ರಚಾರದ ವೇಳೆಯಲ್ಲಿ ನಿಖಿಲ್ ಎಲ್ಲೀದ್ದಿಯಪ್ಪಾ ? ಎಂಬುದು ತೀವ್ರ ಟ್ರೋಲ್ ಆಗಿತ್ತು. ಇದನ್ನ ಬಳಸಿಕೊಂಡು ಈಗ ಬಿಜೆಪಿ ಜೆಡಿಎಸ್ ನ್ನು ಟ್ರೋಲ್ ಮಾಡುತ್ತಿದೆ. ಕರ್ನಾಟಕ ಬಿಜೆಪಿ ಟ್ವಿಟರ್ ಪುಟದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಹೇಳುವ ಮೂಲಕ ವ್ಯಂಗ್ಯವಾಡಲಾಗಿದೆ. ಇದಕ್ಕೆ ಬಿಜೆಪಿ ಅಭಿಮಾನಿಗಳು ಟ್ರೋಲ್ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ.

Mandya update

BJP Karnataka@BJP4Karnataka

Mandya update

Nikhil Yellidiyappa ? 

5,106

1:54 PM - May 23, 2019

Twitter Ads info and privacy

1,365 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا