Urdu   /   English   /   Nawayathi

ರಾಯಚೂರು: ಮಧು ಕೊಲೆಯ ಹಿಂದೆ 'ಪ್ರಭಾವೀ ಕುಟುಂಬ'ದ ವ್ಯಕ್ತಿ ಕೈವಾಡ, ಸಿಐಡಿ ತನಿಖೆಯಿಂದ ಬಹಿರಂಗ

share with us

ಬೆಂಗಳೂರು: 24 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ  ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ ಮೆಂಟ್ (ಸಿಐಡಿ) ತಂಡಕ್ಕೆ ಆ ಪ್ರದೇಶದ "ಪ್ರಭಾವಿ ಕುಟುಂಬ"ದವರೆನ್ನಲಾದ ಇನ್ನೋರ್ವ ಪುರುಷನ ಸಂಬಂಧದ ಸುಳಿವು ದೊರಕಿದೆ.ಈ ಪ್ರಭಾವಿ ಕುಟುಂಬದ ವ್ಯಕ್ತಿ ಇದೀಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯ ಜತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದನೆನ್ನಲಾಗಿದೆ.ಇನ್ನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತೆ, ಅತ್ಯಾಚಾರ ಹಾಗೂ ಹತ್ಯೆಯಲ್ಲಿ ಇನ್ನಷ್ಟು ಆರೋಪಿಗಳು ಶಾಮೀಲಾಗಿದ್ದರೆ ಎನ್ನುವ ಕುರಿತು ಸಹ ಸಿಐಡಿ ತಂಡ ತನಿಖೆ ಕೈಗೊಂಡಿದೆ. ವಿದ್ಯಾರ್ಥಿನಿ ಮೃತದೇಹವು ಅರ್ಧ ಸುಟ್ಟಿದ್ದು ಕೊಳೆತ ಸ್ಥಿತಿಯಲ್ಲಿ ರಾಯಚೂರು ದೇವಾಲಯವೊಂದರ ಸಮೀಪದ ಮೈದಾನದಲ್ಲಿ ಮರವೊಂದಕ್ಕೆ ನೇಣು ಬಿಗಿದಂತೆ ಪತ್ತೆಯಾಗಿತ್ತು. "ವಿದ್ಯಾರ್ಥಿನಿಯ ಮೊಬೈಲ್ ನಿಂದ ಅದೇ ಪ್ರದೇಶದ ಇನ್ನೊಬ್ಬ ವ್ಯಕ್ತಿಗೆ  ಟೆಕ್ಸ್ಟ್ ಸಂದೇಶ ರವಾನಿಸಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಆರೋಪಿ ಸುದರ್ಶನ್ ಯಾದವ್ ಇತರೆ ಮೂವರು ವ್ಯಕ್ತಿಗಳೊಡನೆ ಆ ದುರಂತದ ಘಟನೆ ನಡೆದ ದಿನ ಸ್ಥಳದಲ್ಲಿದ್ದ ಎನ್ನುವುದು ನಮಗೆ ಅರಿವಿಗೆ ಬಂದಿದೆ. ನಾವೀಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ಅದರಲ್ಲಿ ಇತರ ಮೂವರ ಗುರುತು ಪತ್ತೆಯಾಗಲಿದೆ, ಇವರಲ್ಲಿ ಓರ್ವ ವ್ಯಕ್ತಿ ಸ್ಥಳೀಯ ಶ್ರೀಮಂತ, ಪ್ರಭಾವಶಾಲಿ ಕುಟುಂಬಕ್ಕೆ ಸೇರಿದವರೆನ್ನಲಾಗಿದೆ."ತನಿಖಾಧಿಕಾರಿಗಳ ಪೈಕಿ ಒಬ್ಬ ಅಧಿಕಾರಿ ವಿವರಿಸಿದ್ದಾರೆ. ಏತನ್ಮಧ್ಯೆ, ಬೆಂಗಳೂರಿನ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಯ ತಂಡವು ಸ್ಥಳಕ್ಕೆ ಭೇಟಿ ನೀಡಿ, ಕೈಬರಹದ ತಜ್ಞರಿಂದ ಪರೀಕ್ಷಿಸಲ್ಪಡುವ ಡೆತ್ ನೋಟ್ ಸೇರಿದಂತೆ ಸಾಕ್ಷಿಗಳನ್ನು ಸಂಗ್ರಹಿಸಿದೆ. ವಿದ್ಯಾರ್ಥಿಗಳ ಕುಟುಂಬ, ಮತ್ತು ಅವಳ ಸ್ನೇಹಿತರನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಮೃತಳ ಸ್ನೇಹಿತರಿಂದ ಪಡೆದ ಹೇಳಿಕೆಗಳ ಹೊರತಾಗಿಯೂ ಪ್ರಭಾವಿ ಕುಟುಂಬದ ಸಂಬಂಧ ಹೊಂದಿದ ಇತರೆ ವ್ಯಕ್ತಿಯ ಉಪಸ್ಥಿತಿ ಬಗೆಗೆ ಎಫ್ಐಆರ್ ನಲ್ಲಿ ದಾಖಲಾಗಿಲ್ಲ. ವಿದ್ಯಾರ್ಥಿನಿ ಸ್ನೇಹಿತರು ಮತ್ತು ಕುಟುಂಬವು ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಬಲವಾಗಿ ವಾದಿಸಿದೆ. ನೇಣಿಗೆ ಶರಣಾಗುವುದಾದರೆ ಆಕೆಯ ದೇಹವೇಕೆ ಅರ್ಧ ಸುಟ್ಟಿದೆ ಎಂದು ಅವರು ಪ್ರಶ್ನಿಸುತ್ತಾರೆ.

"ಒಬ್ಬ ವ್ಯಕ್ತಿಯು ದೇಹಕ್ಕೆ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ ಬಳಿಕ ತನ್ನನ್ನು ತಾನು ನೇಣು ಹಾಕಿಕೊಳ್ಳುವುದು ಸಾಧ್ಯವಿದೆಯೆ?ಬೆಂಕಿಯ ಸುಡುವಿಕೆಯಿಂದ ತಪ್ಪಿಸಿಕೊಳ್ಳಬೇಕಾಗಿದ್ದಾಗಲೂ ನೇಣು ಹಾಕಿಕೊಳ್ಳುವುದು ಹೇಗೆ ಸಾಧ್ಯವಾಗುವುದು?" ಓರ್ವ ಕುಟುಂಬ ಸದಸ್ಯರು ಪ್ರಶ್ನಿಸಿದ್ದಾರೆ.ಆಕೆಯ ಕುಟುಂಬದವರು ಡೆತ್ ನೋಟ್ ನ ನೈಜತೆಯ ಬಗೆಗೆ ಅನುಮಾನಿಸಿದ್ದು ಆಕೆ ಸಾಮಾನ್ಯವಾಗಿ ಬರವಣಿಗೆ ಹಾಗೂ ಸಂವಹನಕ್ಕೆ ಇಂಗ್ಲಿಷ್ ಬಳಸುತ್ತಿದ್ದಳು. ಆದರೆ ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೋಟ್ ಕನ್ನಡದಲ್ಲಿದೆ ಎಂದು ಅವರು ವಾದಿಸಿದ್ದಾರೆ. ಇನ್ನು ಡೆತ್ ನೋಟ್ ನಲ್ಲಿನ ವಿದ್ಯಾರ್ಥಿನಿಯ ಕನ್ನಡ ಕೈಬರಹಕ್ಕೆ ಹಾಗೂ ಇತರೆಡೆಗಳಲ್ಲಿನ ಆಕೆಯ ಕೈಬರಹಕ್ಕೆ ಹೋಲಿಕೆ ಕಂಡುಕೊಳ್ಳುವಲ್ಲಿ ಪ್ರಾಥಮಿಕ ತನಿಖೆಯಲ್ಲಿ ತನಿಖೆ ತಂಡವು ವಿಫಲವಾಗಿದೆ. "ಕನ್ನಡದಲ್ಲಿ ಅವರ ಬರಹದ ಒಂದೇ ಒಂದು ಹಾಳೆಯೂ ನಮಗೆ ಸಿಕ್ಕಿಲ್ಲ, ಆಕೆಯ ಎಲ್ಲಾ ನೋಟ್ ಬುಕ್ ಗಳಲ್ಲಿ ಇಂಗ್ಲಿಷ್ ಭಾಷೆಯಲ್ಲೇ ಬರೆಯಲಾಗಿದೆ." ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿದ್ಯಾರ್ಥಿನಿಯ ಫೋನ್ ನಿಂದ ವಾಟ್ಸ್ ಅಪ್ ಸಂದೇಶಗಳನ್ನು ಸಹ ಸಿಐಡಿ ಪರಿಶೀಲನೆ ನಡೆಸಿದೆ. ಅದನ್ನು ಸುದರ್ಶನ್ ಯಾದವ್ ಅವರ ಸಹೋದರಿಗೆ ಕಳುಹಿಸಲಾಗಿದೆ. ಸಂದೇಶಗಳ ಮೂಲಕ, ಯಾದವ್ ಅವಳನ್ನು ತೊಂದರೆಗೆ ಒಲಪಡಿಸುತ್ತಿದ್ದ.ಈ ಕುರಿತು ಆಕೆ ಅವನ ಸೋದರಿಗೆ ದೂರು ಕೊಟ್ಟಿದ್ದಳು. ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಬಲಿಪಶುವಿನ ಸ್ನೇಹಿತರಿಂದ ಪಡೆದ ಹೇಳಿಕೆಳ ಪ್ರಕಾರ, ಯಾದವ್ ಮತ್ತು,ಋತ ವಿದ್ಯಾರ್ಥಿನಿಗೆ  ಕಳೆದ ಐದು ವರ್ಷಗಳಿಂದ ಸಂಬಂಧವಿದೆ. ಯಾದವ್ ಬಗೆಗೆ ಆಕೆ ತುಂಬಾ ಆರೋಪ ಮಾಡಿದ್ದಾಳೆ. ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ಆತ ಅಸೂಯೆ ಪಡುತ್ತಾನೆ,  ಕಿರುಕುಳ ನೀಡುತ್ತಾರೆ. ಈ ನಡವಳಿಕೆಯಿಂದ ಬೇಸತ್ತ ಮಧು ಕಳೆದ ಐದು ತಿಂಗಳಿನಿಂದ ಆತನಿಂದ ದೂರವಿದ್ದಾಳೆ.ಇತ್ತೀಚೆಗೆ, ಯಾದವ್ ಆರ್ಟಿಓ ಸರ್ಕಲ್ ನಲ್ಲಿ ಆಕೆಯನ್ನು ನಿಲ್ಲಿಸಿ ತೋಳನ್ನು ಹಿಡಿದು ಎಳೆದಾಡಿದ್ದನು.ಅಲ್ಲದೆ ಆಕೆ ತನ್ನಿಂದೇನಾದರೂ ತಪ್ಪಿಸಿಕೊಂಡರೆ ತಾನು ಜೀವಹಾನಿ ಮಾಡುವುದಾಗಿಯೂ ಬೆದರಿಕೆ ಹಾಕಿದ್ದನು. "ಏಪ್ರಿಲ್ 16 ರಂದು ಅವಳು  ಮಾಣಿಕಾ ಪ್ರಭು ದೇವಾಲಯದ ಹಿಂದೆ ಶವವಾಗಿ ಪತ್ತೆಯಾಗಿದ್ದಾಳೆ.ಈ ಜಾಗವು ಆಕೆಯ ಕಾಲೇಜಿನಿಂದ 5 ರಿಂದ 6 ಕಿ.ಮೀ ದೂರವಿದೆ. ಈ ಜಾಗ ಯಾದವ್ ಗೆ ಸೇರಿದ್ದಾಗಿದೆ.ಅಲ್ಲದೆ ಇದು ಅವ್ನ ಸ್ನೇಹಿತರ ಜತೆ ಸೇರಿ ಪಾರ್ಟಿ ಮಾಡುವ ಮಾಮೂಲಿ ಸ್ಥಳವಾಗಿತ್ತು. ಹೀಗಾಗಿ ಯಾದವ್ ತನ್ನ ಕೆಲ ಸ್ನೇಹಿತರೊಡನೆ ಆಕೆಯನ್ನು ಅಪಹರಿಸಿ ಇಲ್ಲಿಗೆ ತಂದಿದ್ದನೆ ಎನ್ನುವ ಕುರುತು ನಾವು ತನಿಖೆ ನಡೆಸುತ್ತಿದ್ದೇವೆ."ತನಿಖಾಧಿಕಾರಿ ತಿಳಿಸಿದ್ದಾರೆ. ಆದರೆ ಅವರ ಕಾಲೇಜು ಸ್ನೇಹಿತರು ಹಾಗೂ ಪೋಷಕರು ಸಂಪೂರ್ಣ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಅಲ್ಲದೆ ಪ್ರಕರಣವನ್ನು ಮುಚ್ಚಿ ಹಾಕಲು "ಪ್ರೇಮ ಸಂಬಂಧ ಆತ್ಮಹತ್ಯೆ" ಎಂದು ನಾಟಕವಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. "ನಮ್ಮ ಮಗಳು ಅತ್ಯಂತ ಧೈರ್ಯವಂತೆಯಾಗಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಿಲ್ಲ." ಪೋಷಕರು ಹೇಳಿದ್ದಾರೆ.

ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ

ಮಧು ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ಮೇಣದ ಬತ್ತಿ ಹಿಡಿದು ಪ್ರತಿಭಟನೆಯನ್ನು ನಡೆಸಿದೆ. ಅಲ್ಲದೆ ನಿನ್ನೆ(ಮಂಗಳವಾರ) ನಡೆದ ಚುನವಣೆ ವೇಳೆ ಶಕ್ತಿನಗರದಲ್ಲಿ ಕೆಲ ಯುವಕರು  ಕಪ್ಪು ಬ್ಯಾಂಡ್ಗಳನ್ನು ಧರಿಸಿ, ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು.  "ನಾವು ಚುನಾವಣೆಯಲ್ಲಿ ಕೂಡಾ ಈ ಸಂದೇಶ ನಿಡಲು ಬಯಸುತ್ತೇವೆ.. ನಾವು ಮಧು ದುರಂತ ಸಾವನ್ನು ಮರೆಯುವುದಿಲ್ಲ. ಭವಿಷ್ಯದಲ್ಲಿ ಇಂತಹುದು ಮತ್ತೆ ಸಂಭವಿಸದಂತೆ ತಡೆಯಬೇಕಾಗಿದೆ" ಓರ್ವ ಪ್ರತಿಭಟನಾಕಾರ ಯುವಕ ಹೇಳಿದ್ದಾನೆ.

ಕ, ಪ್ರ ವರದಿ     

Prayer Timings

Fajr فجر
Dhuhr الظهر
Asr أسر
Maghrib مغرب
Isha عشا