Urdu   /   English   /   Nawayathi

ಅವಾಚ್ಯ ಶಬ್ದಗಳಿಂದ ನಿಂದನೆ... ಒಂದು ಸಮುದಾಯಕ್ಕೆ ಧಮ್ಕಿ​ ಹಾಕಿದ ಜಿ.ಪಂ ಮಾಜಿ ಅಧ್ಯಕ್ಷ

share with us

ದಾವಣಗೆರೆ: 24 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ತಾಲೂಕಿನ ನೇರ್ಲಗಿ ಗ್ರಾಮದಲ್ಲಿ ಸಮುದಾಯವೊಂದರ ಜನರನ್ನು ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿನ್ನೆ ನೇರ್ಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ಸಮುದಾಯದ ಮುಖಂಡರನ್ನೇ ಟಾರ್ಗೆಟ್​​ ಮಾಡಿ ಅವರ ಮುಂದೆಯೇ ಬಹಿರಂಗವಾಗಿ ರಾಮಪ್ಪ ನಿಂದಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಕಡೆ ನೀವೇ ಅಧಿಕಾರ ಮಾಡಬೇಕಾ? ನಿಮಗೆ ಈಶ್ವರ ಬಂದು ಲಿಂಗ ಕಟ್ಟಿದ್ದಾನಾ? ಈ ಬಾರಿ ಹಿಂದುಳಿದವರಿಗೆ ಅಧಿಕಾರ ಕೊಡಿ ಎಂದು ಧಮ್ಕಿ ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ. ಮಂಜಪ್ಪ ಪರವಾಗಿರುವ ರಾಮಪ್ಪ ಈ ದುರ್ವರ್ತನೆ ತೋರಿದ್ದಾರೆ ಎನ್ನಲಾಗ್ತಿದೆ. ರಾಮಪ್ಪ ಅವರ ನಡೆಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا