Urdu   /   English   /   Nawayathi

ಈಶಾನ್ಯ ರಾಜ್ಯಗಳಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು

share with us

ನವದೆಹಲಿ: 24 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಈಶಾನ್ಯ ಭಾರತದ ರಾಜ್ಯಗಳಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ನಿನ್ನೆ ಪ್ರಬಲ ಭೂಕಂಪ ಕಂಪಿಸಿದ್ದು, ಅರುಣಾಚಲದ ಪಶ್ಚಿಮ ಸಿಯಾಂಗ್‌ನಲ್ಲಿ ರಾತ್ರಿ ಸುಮಾರು 1.30 ರ ವೇಳೆಗೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು ವಾಯುವ್ಯ ಭಾಗದದಲ್ಲಿ ಕೇಂದ್ರಿಕೃತವಾಗಿತ್ತು, 9 ಕಿ.ಮೀ ಆಳದಲ್ಲಿತ್ತು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ಧಾರೆ. ಬುಧವಾರ ಕೆಲವೆಡೆ ಭೂಮಿ ಕಂಪನವಾಗಿದ್ದು, ಚೀನಾದ ಕೆಲ ಭಾಗಗಳು, ನೇಪಾಳ, ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಂಪನ ಅನುಭವಕ್ಕೆ ಬಂದಿದೆ. ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ರಾಜ್ಯಗಳನ್ನು ವಿಶ್ವದ ಅತಿ ಹೆಚ್ಚು ಭೂಕಂಪನ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. ಇದುವರೆಗೂ ಯಾವುದೇ ಹಾನಿಯ ಬಗ್ಗೆ ವಿವರಗಳು ಲಭ್ಯವಾಗಿಲ್ಲ. ಭೂಕಂಪದ ತೀವ್ರತೆ ಕಡಿಮೆ ಇರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ಈ ವರೆಗೂ ವರದಿಯಾಗಿಲ್ಲ. 

ANI✔@ANI

EMSC: An earthquake with a magnitude of 4.8 on the Richter Scale hit Kathmandu, Nepal at 6:14 AM today.

167

6:38 AM - Apr 24, 2019

Twitter Ads info and privacy

61 people are talking about this

ANI✔@ANI

National Emergency Operation Centre, Nepal: Earthquakes with magnitudes of 5.2 and 4.3 hit Naubise in Dhading District at 6:29 AM and 6:40 AM respectively, today.

174

7:07 AM - Apr 24, 2019

Twitter Ads info and privacy

55 people are talking about this

 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا