Urdu   /   English   /   Nawayathi

'ಚೌಕೀಧಾರ್ ಚೋರ್ ಹೇ' ಹೇಳಿಕೆ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್

share with us

ನವದೆಹಲಿ: 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ವತಃ ಸುಪ್ರೀಂ ಕೋರ್ಟ್ ಚೌಕಿದಾರ್ ಚೋರ್ ಹೈ ಎಂದು ತೀರ್ಪು ನೀಡಿದೆ ಎಂದು ಸುಪ್ರೀಂ ಕೋರ್ಟ್ ನ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ ಎಂಬ ಆಕ್ಷೇಪಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೊಟೀಸ್ ಜಾರಿ ಮಾಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ರಾಹುಲ್ ಗಾಂಧಿಗೆ ಇಂದು ನೊಟೀಸ್ ಜಾರಿ ಮಾಡಿ ಏಪ್ರಿಲ್ 30ಕ್ಕೆ ಅರ್ಜಿ ವಿಚಾರಣೆಯನ್ನು ನಿಗದಿಪಡಿಸಿದೆ. ನ್ಯಾಯಾಲಯ ಅಂದೇ ರಫೆಲ್ ಪುನರ್ ಪರಿಶೀಲನಾ ಅರ್ಜಿಯನ್ನು ಸಹ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಫ್ರಾನ್ಸ್ ಸರ್ಕಾರದೊಂದಿಗೆ ಭಾರತ ಸರ್ಕಾರ ಮಾಡಿಕೊಂಡಿರುವ ರಫೆಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಕ್ಷೇಪವೆತ್ತಿ ಸುಪ್ರೀಂ ಕೋರ್ಟ್ ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಮಾಧ್ಯಮಗಳಿಗೆ ದೊರೆತ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್‌ ಏಪ್ರಿಲ್‌ 10ರ ವಿಚಾರಣೆ ವೇಳೆ ಹೇಳಿದ್ದನ್ನು, ಸುಪ್ರೀಂಕೋರ್ಟ್‌ ಕೂಡಾ ''ಚೌಕಿದಾರ್‌ (ಪ್ರಧಾನಿ ಮೋದಿ) ಚೋರ್‌ ಹೈ ಎಂದು ತೀರ್ಪು ನೀಡಿದೆ ಎಂದು ರಾಹುಲ್‌ ವ್ಯಾಖ್ಯಾನಿಸಿದ್ದರು. ಈ ಸಂಬಂಧ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಅವರು ರಾಹುಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ದಾವೆ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಏಪ್ರಿಲ್‌ 22ರೊಳಗೆ ವಿವರಣೆ ನೀಡುವಂತೆ ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು. ನಿನ್ನೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ನೇತೃತ್ವದ ಪೀಠದ ಮುಂದೆ ರಾಹುಲ್‌ ಅವರು ಅಫಿಡವಿಟ್‌ ಸಲ್ಲಿಸಿ  ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನ ಮಾಡಿರುವುದು ನಿಜವೆಂದು  ಒಪ್ಪಿಕೊಂಡಿದ್ದಾರೆ. ಆದರೆ, ಇಂದು ನಡೆದ ವಿಚಾರಣೆ ವೇಳೆ ಮೀನಾಕ್ಷಿ ಲೇಖಿ ಅವರ ಪರ ವಾದ ಮಂಡಿಸಿದ ಹಿರಿಯ ಅಡ್ವೊಕೇಟ್ ಮುಕುಲ್ ರೊಹ್ಟಗಿ, ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್ಟು ಕೇವಲ ಬಾಯಿ ಮಾತಿಗೆ ತಪ್ಪಾಗಿ ಒಪ್ಪಿಕೊಂಡಿದ್ದಾಗಿದ್ದು ಅವರು ಕ್ಷಮೆ ಕೇಳಿಲ್ಲ ಎಂದು ಆಕ್ಷೇಪವೆತ್ತಿದರು. ಇದನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿಗಳು ಯಾರು ಚೌಕಿದಾರ್ ಎಂದು ಕೇಳಿದರು. ಆಗ ರೊಹ್ಟಗಿ ಅದನ್ನು ರಾಹುಲ್ ಗಾಂಧಿಯವರಿಗೆ ಕೇಳಿ, ಅವರು ಆ ಪದವನ್ನು ಬಳಸಿದ್ದು ಎಂದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا