Urdu   /   English   /   Nawayathi

ಭಟ್ಕಳದಲ್ಲಿ ನಾಳೆ ನಡೆಯಲಿರುವ ಚುನಾವಣೆಗಾಗಿ ಸಕಲ ಸಿದ್ಧತೆ

share with us

ಭಟ್ಕಳ: 22 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಉತ್ತರ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 23ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಭಟ್ಕಳದಲ್ಲಿ ಮತಗಟ್ಟೆಗಳಿಗೆ ಮತಯಂತ್ರ ಸಾಗಿಸುವ ಕಾರ್ಯ ಇಂದು ನಡೆಯಿತು. ಈ ಚುನಾವಣೆಯಲ್ಲಿ ಒಟ್ಟು 2,15,440 ಮತದಾರರ ಪಟ್ಟಿಯನ್ನು ಇಂದು ಅಂತಿಮಗೊಳಿಸಲಾಯಿತು. ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ 248 ಮತಗಟ್ಟೆಯ ವ್ಯಾಪ್ತಿಯಲ್ಲಿ ಇಲ್ಲಿನ ಸಹಾಯಕ ಚುನಾವಣಾಧಿಕಾರಿಗಳಾದ ಸಾಜಿದ್ ಮುಲ್ಲಾ ಅವರು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ. ನಿಗದಿಪಡಿಸಿದ ಮತಗಟ್ಟಿಗಳಿಗೆ ತಲುಪಲು ಒಟ್ಟು 1096 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇತರೆ ಕಾರ್ಯಗಳಿಗೆ 41 ಮಿನಿ ಬಸ್, 24 ಜೀಪು ಮತ್ತು 24 ಬಸ್ಸುಗಳ ಸೌಕರ್ಯ ಒದಗಿಸಲಾಗಿದೆ. ಒಟ್ಟು 40 ವಿವಿ ಪ್ಯಾಟ್ ಯಂತ್ರಗಳನ್ನು ಉಪಯೋಗಿಸುತ್ತಿದ್ದು, ಇನ್ನು 20 ಹೆಚ್ಚು ಯಂತ್ರಗಳನ್ನು ಮುಂಜಾಗೃತೆಯ ಸಲುವಾಗಿ ಇಟ್ಟುಕೊಳ್ಳಲಾಗಿದೆ. 33 ವಾಹನಗಳಲ್ಲಿ ಜಿ,ಪಿ,ಎಸ್ ಅಳವಡಿಸಲಾಗಿದ್ದು, 53 ಮತಗಟ್ಟಿಗಳಿಗೆ ಮೈಕ್ರೋ ಅಬ್ಸರ್ವರ್ ಕೂಡ ಅಳವಡಿಸಲಾಗಿದೆ ಎಂದು ಹೇಳಿದರು.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا