Urdu   /   English   /   Nawayathi

ಉಗ್ರರ ಗುಂಡಿನ ದಾಳಿಗೆ 15 ಪ್ರಯಾಣಿಕರ ಬಲಿ

share with us

ಕರಾಚಿ: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ ಹಿಂಸಾಚಾರ ಪೀಡಿತ ಬಲುಚಿಸ್ಥಾನ ಪ್ರಾಂತ್ಯದಲ್ಲಿ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದೆ. ಹೆದ್ದಾರಿಯಲ್ಲಿ ಬಸ್ಸೊಂದನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ಉಗ್ರಗಾಮಿಗಳ ಗುಂಪೊಂದು 14 ಪ್ರಯಾಣಿಕರನ್ನು ಗುಂಡಿಟ್ಟು ಕೊಂದು ಪರಾರಿಯಾಗಿದೆ. ಕರಾಚಿ ಮತ್ತು ಗ್ವಾಡರ್ ನಡುವೆ ಸಂಚರಿಸುತ್ತಿದ್ದ ಬಸ್ ತಡೆದ 20 ಜನ ಶಸ್ತ್ರಸಜ್ಜಿತ ಉಗ್ರರು ಪ್ರಯಾಣಿಕರನ್ನು ವಾಹನದಿಂದ ಕೆಳಗಿಳಿಸಿ ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ 14 ಜನರನ್ನು ಕೊಂದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಬಲೂಚಿಸ್ಥಾನದ ಗೊಮಾರಾ ಪ್ರದೇಶದ ಮಾಕ್ರಾನ್ ಕೋಸ್ಟನ್ ಹೈವೆ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡಿರುವ ಇನ್ನಿಬ್ಬರ ಸ್ಥಿತಿ ಶೋಚನೀಯವಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا