Urdu   /   English   /   Nawayathi

56,000ಕೋಟಿ ರೂ. ವೆಚ್ಚದ ಸಬ್‌ ಮರೀನ್‌ಗಳ ನಿರ್ಮಾಣಕ್ಕೆ ಮುಂದಾದ ನೌಕಾಪಡೆ ..!

share with us

ನವದೆಹಲಿ: 06 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಭಾರತೀಯ ನೌಕಾದಳ ಮತ್ತಷ್ಟು ಬಲವರ್ಧನೆ ಆಗುತ್ತಿದ್ದು, ಮತ್ತೊಂದು ಬಹುದೊಡ್ಡ ಯೋಜನೆಗೆ ಚಾಲನೆ ನೀಡಲಾಗಿದೆ. ನೌಕಾದಳವೂ ತನ್ನ ಬತ್ತಳಿಕೆಗಾಗಿ ಆರು ಆಕ್ರಮಣಕಾರಿ ಅತ್ಯಾಧುನಿಕ ಕ್ಷಿಪಣಿ ದಾಳಿ ಸಾಮಥ್ರ್ಯದ(ಸಬ್ ಮರೀನ್) ಜಲಾಂತರ್ಗಾಮಿಗಳ ನಿರ್ಮಾಣ ಮಾಡುವ ಯೋಜನೆಗೆ ಕೈಹಾಕಿದೆ. ಏಷ್ಯಾ ಸಾಗರ ಪ್ರದೇಶಗಳಲ್ಲಿ ಚೀನಾ ನೌಕಾಪಡೆಯ ಚಟುವಟಿಕೆ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಈ ಕ್ರಮ ಗಮನಾರ್ಹ. ಭಾರತದಲ್ಲಿ ಪ್ರಸುತ್ತ 100 ಸಬ್ ಮರೀನ್‍ಗಳಿದ್ದು, ಪಾಕಿಸ್ತಾನದ ಬಳಿ 20 ಜಲಾಂತರ್ಗಾಮಿಗಳಿವೆ. ಚೀನಾ ಸಮುದ್ರಪ್ರದೇಶಗಳಲ್ಲಿ ಚಲನ-ವಲನ ತೀವ್ರಗೊಳಿಸಿದ್ದು ಭಾರತದ ನೌಕಾದಳದ ಸಾಮಥ್ರ್ಯ ಹೆಚ್ಚುತ್ತಿರುವ ಬಗ್ಗೆ ಆತಂಕಗೊಂಡಿದೆ. ನೌಕಾದಳ 48 ವರ್ಷಗಳ ಬಳಿಕ ಅಮೆರಿಕಾದ ಅತ್ಯಾಧುನಿಕ 24ಎಮ್‍ಎಚ್ -60 ರೋಮಿಯೋ ಸೀಹಾಕ್ ಹೆಲಿಕಾಪ್ಟರ್‍ಗಳ ಸೇರ್ಪಡೆಗೆ ಅಂಕಿತ ಹಾಕಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನೌಕಾದಳ, ಸಮುದ್ರದದಲ್ಲಿನ 500ಕಿ.ಮೀ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಬಲ್ಲ ಅಗಾಧ ಸಾಮಥ್ರ್ಯದ ಸಬ್ ಮರೀನ್‍ಗಳ ನಿರ್ಮಾಣಕ್ಕೆ ಮುಂದಾಗಿದೆ. ಸೇನೆಯು 50,000 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಆಸಕ್ತಿ ಹೊಂದಿರುವ ಜಲಾಂತರ್ಗಾಮಿ ತಯಾರು ಮಾಡುವ ಎಲ್ಲಾ ವಿದೇಶ ಕಂಪನಿಗಳಿಗೂ ಮುಕ್ತ ಆಹ್ವಾನ ನೀಡಲಾಗಿದೆ. ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ -75ನ ಅಡಿಯಲ್ಲಿ, 6 ಡೀಸೆಲ್-ವಿದ್ಯುತ್ ಜಲಾಂತರ್ಗಾಮಿಗಳನ್ನು ಉತ್ಪಾದಿಸಬೇಕೆಂಬ ಗುರಿ ಹೊಂದಲಾಗಿದೆ. ಈಗಾಗಲೇ ಮುಂಬೈನಲ್ಲಿ ನಿರ್ಮಾಣ ಆಗುತ್ತಿರುವ ಸ್ಕಾರ್ಪಿಯನ್ ಶ್ರೇಣಿಯ ಸಬ್‍ಮರೀನ್‍ಗಳಿಗಿಂತ 50 ಪಟ್ಟು ಈ ಯೋಜನೆ ದೊಡ್ಡದಾಗಿದೆ. ನೌಕಾಪಡೆಯು 500 ಕಿಮೀ ವ್ಯಾಪ್ತಿಯ ಕ್ಷಿಪಣಿಗಳನ್ನು ಜಲಾಂತರ್ಗಾಮಿಗಳಿಗೆ ಹೊಂದಿಸಲು ಉದ್ದೇಶಿಸಿದೆ. ಅಧಿಕ ಕಾರ್ಯಕ್ಷಮತೆ ದಾಳಿ ಸಾಮಥ್ರ್ಯ ಹೊಂದಿರುವುದರ ಜೊತೆಗೆ, 12ಭೂ ಆಕ್ರಮಣ ಖಂಡಾಂತರ ಕ್ಷಿಪಣಿ (ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿ)ನೌಕಾ ಧ್ವಂಸಕ ಕ್ಷಿಪಣಿ (ಆ್ಯಂಟಿ-ಶಿಪ್ ಕ್ರೂಸ್ ಮಿಸೈಲ್)ಹೊಂದಲು ಉದ್ದೇಶಿಸಿಲಾಗಿದೆ. ಜಲಾಂತರ್ಗಾಮಿ 18 ಹೆವಿ-ವೇಟ್ ಟಾರ್ಪಿಡೋಗಳನ್ನ ಕೊಂಡೊಯ್ಯುವುದು ಮತ್ತು ಲಾಂಚ್ ಮಾಡುವ ಎಲ್ಲಾ ರೀತಿಯ ವ್ಯವಸ್ಥೆ ಇರುವಂತಹ ಯೋಜನೆ ಇದಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا