Urdu   /   English   /   Nawayathi

ಭಾರತದ ಎ-ಸ್ಯಾಟ್ ಪರೀಕ್ಷೆ ಕುರಿತು ಚೀನಾ ಹೇಳಿದ್ದೇನು ಗೊತ್ತೇ..?

share with us

ಬೀಜಿಂಗ್: 28 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಎ-ಸ್ಯಾಟ್ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಮೂಲಕ ಸಜೀವ ಉಪಗ್ರಹವನ್ನು ಯಶಸ್ವಿಯಾಗಿ ಹೊಡೆದುರುಳಿಸಿ ದಾಖಲೆ ನಿರ್ಮಿಸುತ್ತಿದ್ದಂತೆ ವಿವಿಧ ರಾಷ್ಟ್ರಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಚೀನಾ ರಕ್ಷಣಾತ್ಮಕವಾಗಿ ಪ್ರತಿಕ್ರಯಿಸಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಬಾಹ್ಯಾಕಾಶದಲ್ಲಿ ಶಾಂತಿ ಕಾಪಾಡಿಕೊಳ್ಳಲು ಬದ್ಧವಾಗಿರಲಿದೆ ಎಂದು ಭಾವಿಸುತ್ತೇನೆ ಚೀನಾ ಹೇಳಿದೆ. ಭಾರತ ಉಪಗ್ರಹ-ವಿರೋಧಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ ಎನ್ನುವ ವರದಿಯನ್ನು ನಾವು ಗಮನಿಸಿದ್ದೇವೆ. ಪ್ರತಿ ದೇಶವೂ ಬಾಹ್ಯಾಕಾಶದಲ್ಲಿ ಶಾಂತಿಯನ್ನು ಎತ್ತಿ ಹಿಡಿಯಲು ಬದ್ದವಾಗಿದೆ ಎಂದು ನಾವು ಭಾವಿಸುತ್ತೇವೆ ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಜಾಗತಿಕ ಉಪಗ್ರಹವೊಂದನ್ನು ಹೊಡೆದುಹಾಕುವ ಮೂಲಕ ಭಾರತ ಉಪಗ್ರಹ-ವಿರೋಧಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದರು. ಇದು ಭಾರತವನ್ನು ಜಾಗತಿಕ ಸೂಪರ್ ಪರ್ವ ರಾಷ್ಟ್ರಗಳ ಸಾಲಿನಲ್ಲಿ ಸೇರಿಸುವಂತಹ ಅಪರೂಪದ ಸಾಧನೆಯಾಗಿದೆ. ಜಗತ್ತಿನಲ್ಲಿ ಅಮೆರಿಕಾ, ರಷ್ಯಾ, ಚೀನಾ ಹೊರತಾಗಿ ಶತ್ರು ರಾಷ್ಟ್ರಗಳ ಉಪಗ್ರಹಗಳನ್ನು ಹೊಡೆದುರುಳಿಸಬಲ್ಲ ಕಾರ್ಯತಂತ್ರದ ಸಾಮಥ್ರ್ಯವನ್ನು ಪಡೆದುಕೊಂಡ ಜಗತ್ತಿನ ನಾಲ್ಕನೇ ರಾಷ್ಟ್ರ ಭಾರತವಾಗಿದೆ. 2007ರ ಜನವರಿಯಲ್ಲಿ ಹವಾಮಾನ ಉಪಗ್ರಹವನ್ನು ನಾಶಗೊಳಿಸುವ ಮೂಲಕ ಚೀನಾ ಉಪಗ್ರಹ ವಿರೋಧಿ ಕ್ಷಿಪಣಿ ನಿರ್ನಾಮ ಕಾರ್ಯಾಚರಣೆ ಪರೀಕ್ಷೆ ನಡೆಸಿತ್ತು.

ಈ, ಸಂ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا