Urdu   /   English   /   Nawayathi

ದುಡ್ಡು ಕದ್ದ ಆರೋಪ... ಬಾಲಕಿಯನ್ನು ಥಳಿಸಿ, ಕಟ್ಟಿಹಾಕಿದ ಅಂಗಡಿ ಮಾಲೀಕ

share with us

ಕೊಪ್ಪಳ: 20 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಅಂಗಡಿ ಮಾಲೀಕನೋರ್ವ ಐದು ವರ್ಷದ ಬಾಲಕಿಯನ್ನು ದುಡ್ಡು ಕದ್ದಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ಕಟ್ಟಿಹಾಕಿ ಥಳಿಸಿರುವ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ಯಲಬುರ್ಗಾದ ಪ್ರಶಾಂತ್​ ನಗರದಲ್ಲಿ ಈ ಪ್ರಕರಣ ನಡೆದಿದೆ. ಮೋದಿನ್ ಸಾಬ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದೆ. ಅಂಗಡಿಯಲ್ಲಿ ಬಾಲಕಿ 50 ರೂಪಾಯಿ ಕದ್ದಿದ್ದಾಳೆ ಎಂದು ಆರೋಪಿಸಿ ಬಾಲಕಿಯನ್ನು ಅಂಗಡಿ ಮಾಲೀಕ ಮೋದಿನ್​ ಸಾಬ್ ಕಟ್ಟಿಹಾಕಿ ಥಳಿಸಿದ್ದಾನೆ. ಅಲ್ಲದೆ ನೆತ್ತಿ ಸುಡುವ ಬಿಸಿಲಿನಲ್ಲಿ ಸುಮಾರು 2 ಗಂಟೆಗೂ ಅಧಿಕ ಕಾಲ ಬಾಲಕಿಯನ್ನು ಕಟ್ಟಿಹಾಕಿ ಅಮಾನವೀಯತೆ ಮೆರೆದಿದ್ದಾನೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಮೋದಿನ್​ವಿಚಾರಣೆನಡೆಸಿದ್ದಾರೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا