Urdu   /   English   /   Nawayathi

ಹೈಕೋರ್ಟ್​ನಲ್ಲೇ ಕಿತ್ತಾಡಿಕೊಂಡ ಗಂಡ - ಹೆಂಡ್ತಿ... ಜಡ್ಜ್​ ಎದುರೇ ಪತ್ನಿಗೆ ಚಾಕುವಿನಿಂದ ಚುಚ್ಚಿದ ಪತಿ!

share with us

ಚೆನ್ನೈ: 20 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಹೈಕೋರ್ಟ್​ನಲ್ಲಿ ನಾಯಾಧೀಶರ ಎದುರೇ ಗಂಡನೊಬ್ಬ ತನ್ನ ಹೆಂಡ್ತಿಗೆ ಚಾಕುವಿನಿಂದ ದಾಳಿ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಶ್ರೀಪೆರಂಬದೂರು ನಿವಾಸಿ ಶರವಣನ್​ (45) ಕಾರ್ಪೋರೇಷನ್​ ಬಸ್​ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಆತನ ಹೆಂಡ್ತಿ ವರಲಕ್ಷ್ಮಿ (40) ಜೊತೆ ಪದೆ ಪದೇ ಜಗಳ ಆಗುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದ ಕೇಸ್​ ಐದು ವರ್ಷಗಳಿಂದ ಚೆನ್ನೈ ಹೈಕೋರ್ಟ್​ನ ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಮಂಗಳವಾರ ಈ ಕೇಸ್​ ವಿಚಾರಣೆ ನಡೆದಿದೆ. ಇಬ್ಬರೂ ಕೋರ್ಟ್​ಗೆ ಹಾಜರಾಗಿದ್ದಾರೆ. ಜಡ್ಜ್​ ಎದುರೇ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಶರವಣನ್​ ಹೆಂಡ್ತಿ ವರಲಕ್ಷ್ಮೀ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಪೊಲೀಸರು ಆರೋಪಿ ಶರವಣನ್​ನನ್ನು ವಶಕ್ಕೆ ಪಡೆದು, ವರಲಕ್ಷ್ಮಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا