Urdu   /   English   /   Nawayathi

ಗೋದ್ರಾ ಹತ್ಯಾಕಾಂಡ ಆರೋಪಿ ಯಾಕುಬ್ ಪಟಾಲಿಯಾಗೆ ಜೀವಾವಧಿ ಶಿಕ್ಷೆ

share with us

ಅಹ್ಮದಾಬಾದ್: 20 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಗುಜರಾತಿನ ಗೋದ್ರಾದಲ್ಲಿ 'ಸಬರಮತಿ ಎಕ್ಸ್ ಪ್ರೆಸ್' ಗೆ ಬೆಂಕಿ ಹಚ್ಚಿದ ಆರೋಪದಡಿ ಯಾಕೂಬ್ ಪಟಾಲಿಯಾ ಎಂಬ ಆರೋಪಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.  ಯಾಕೂಬ್ ಕಳೆದ ವರ್ಷ ಜನವರಿ ತಿಂಗಳಲ್ಲಿ ಗೋದ್ರಾದಲ್ಲಿ ಸೆರೆಸಿಕ್ಕಿದ್ದ. 2002ರ ಫೆ.27ರಂದು ರೈಲಿನ ಬೋಗಿ ಎಸ್ 6ನಲ್ಲಿ ಬೆಂಕಿ ಹಚ್ಚಿದ ಪರಿಣಾಮ ಸುಮಾರು 59 ಜನರು ಮೃತಪಟ್ಟಿದ್ದರು. ನಂತರದಲ್ಲಿ ಗುಜರಾತಿನಲ್ಲಿ ದಂಗೆಗಳು ಆರಂಭವಾದವು.  ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್ಐಟಿ)ಕ್ಕೆ ವಹಿಸಲಾಗಿತ್ತು. ನ್ಯಾಯಮೂರ್ತಿ ಎಸ್ ಎಚ್ ವೋರಾ ಅವರು ಹತ್ಯೆ ಹಾಗೂ ಪಿತೂರಿ ಆರೋಪದಡಿ ಯಾಕೂಬ್ ನನ್ನು ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ಇದಕ್ಕಿಂತ ಮುಂಚೆ ಆತನ ಸಹೋದರಿಬ್ಬರನ್ನು ಇದೇ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಅದರಲ್ಲಿ ಓರ್ವ ಜೈಲಿನಲ್ಲಿಯೇ ಕೊನೆಯುಸಿರೆಳೆದಿದ್ದನು. ವಿಶೇಷ ನ್ಯಾಯಾಲಯ 2011ರ ಮಾರ್ಚ್ ನಲ್ಲಿ ಒಟ್ಟು 31 ಜನರನ್ನು ಆರೋಪಿಗಳೆಂದು ದೂಷಿಸಿ ಅದರಲ್ಲಿ 11 ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ 20 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಅಕ್ಟೋಬರ್ 2017ರಲ್ಲಿ ಗುಜರಾತ್ ಹೈ ಕೋರ್ಟ್ ಗಲ್ಲು ಶಿಕ್ಷೆಯನ್ನು, ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا