Urdu   /   English   /   Nawayathi

ರಾಹುಲ್ ಸಂವಾದದ ವೇಳೆ ಟೆಕ್ಕಿಗಳ ಮೇಲೆ ಹಲ್ಲೆ: ಬಿಜೆಪಿಯಿಂದ ಪೊಲೀಸ್ ಆಯುಕ್ತರಿಗೆ ದೂರು

share with us

ಬೆಂಗಳೂರು: 19 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದದ ವೇಳೆ ಐಟಿ ಉದ್ಯೋಗಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಹಿನ್ನೆಲೆ‌ ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ನಿಯೋಗ ದೂರು ನೀಡಿದೆ. ಸೋಮವಾರ ಮಾನ್ಯತಾ ಟೆಕ್ ಪಾರ್ಕ್​ನಲ್ಲಿ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮೋದಿ ಮೋದಿ ಅಂತ ಘೋಷಣೆ ಕೂಗಿದ್ದ ಐಟಿ ಉದ್ಯೋಗಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಹಿನ್ನೆಲೆ ಬಿಜೆಪಿ ನಿಯೋಗ ಆರ್.ಅಶೋಕ್ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದೆ. ಪೊಲೀಸ್ ಆಯಕ್ತರ ಭೇಟಿ ಬಳಿಕ ಆರ್ .ಅಶೋಕ್ ಮಾತಾನಾಡಿ, ಕಾಂಗ್ರೆಸ್​ನವರು ನಿನ್ನೆ ಗೂಂಡಾಗಳಂತೆ ದಾಳಿ ಮಾಡಿದ್ದಾರೆ. ಅವರ ಅನಿಸಿಕೆಯಂತೆ ಮತ್ತೊಮ್ಮೆ ಮೋದಿ ಅಂದಿದ್ದಾರೆ. ಅದು ಅವರ ವಾಕ್ ಸ್ವಾತಂತ್ರ್ಯ. ಪ್ರಧಾನಿಗೆ ಜೈ ಅಂದಿದ್ದಕ್ಕೆ ಅವರನ್ನ ಹಿಡಿದು ಪೊಲೀಸರು ರಾತ್ರಿ 10ರ ವರೆಗೂ ಕೂರಿಸಿದ್ದಾರೆ‌. ಚುನಾವಣೆ ಮುನ್ನ ಈ ರೀತಿಯಾದ್ರೆ, ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಆಗುತ್ತದೆ. ಈ ದೃಷ್ಟಿಯಿಂದ ಚುನಾವಣೆ ಸಂದರ್ಭದಲ್ಲಿ ನ್ಯಾಯಯುತವಾಗಿ ನಡೆಯಬೇಕು ಎಂದು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದೇವೆ ಎಂದರು. ಹಲ್ಲೆ ವೇಳೆ ಹಲವು ಮಂದಿಯ ಮೊಬೈಲ್ ಕಳೆದುಹೋಗಿದೆ. ನಮ್ಮ ಮನವಿಗೆ ಆಯುಕ್ತರು ಸ್ಪಂದಿಸಿದ್ದಾರೆ. ಮೋದಿ ಪರ ಘೋಷಣೆ ಕೂಗಿದವರು ಬಿಜೆಪಿಯವರಲ್ಲ. ಅವರೆಲ್ಲ ಸಾಫ್ಟ್​ವೇರ್ ಎಂಜಿನಿಯರ್​ಗಳು. ಅವರ ಪರವಾಗಿ ನಾವಿದ್ದೇವೆ. ಅವರಿಗೆ ಯಾರೇ ತೊಂದರೆ ಕೊಟ್ರು ಅವರ ಪರ ನಾವಿದ್ದೇವೆ. ಬೇಲೂರು ಗೋಪಾಲಕೃಷ್ಣ ಅವರು ಮೋದಿ ಅವರನ್ನ ಹತ್ಯೆ ಮಾಡಿ ಅಂದಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡ್ರಿ ಅಂತ ಆಯುಕ್ತರನ್ನು ಪ್ರಶ್ನಿಸಿದ್ದೇವೆ. ನಿನ್ನೆ ಯಾವ ಕಾನೂನಿನ ಸಲಹೆ ಪಡೆದು ಟೆಕ್ಕಿಗಳನ್ನು ಅರೆಸ್ಟ್ ಮಾಡಿದ್ರಿ ಅಂತ ಪ್ರಶ್ನೆ ಮಾಡಿದ್ದೇವೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದರು. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا