Urdu   /   English   /   Nawayathi

ನಟಿಗಾಗಿ ಗೆಳೆಯರ ಕಿತ್ತಾಟ ಪ್ರಕರಣ: ಗಲಾಟೆ ನಂತರದ ಸಿಸಿಟಿವಿ ದೃಶ್ಯಾವಳಿ ಲಭ್ಯ

share with us

ಬೆಂಗಳೂರು: 19 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಸ್ಯಾಂಡಲ್​​​​​​ವುಡ್ ನಟಿ ರಾಗಿಣಿಗಾಗಿ ಅವರ ಇಬ್ಬರು ಗೆಳೆಯರು ಹೊಡೆದಾಡಿಕೊಂಡ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಘಟನೆ ನಂತರ ಬೌನ್ಸರ್​​​​​​ಗಳು ಶಿವಪ್ರಕಾಶ್​​​ನನ್ನು ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಮೊದಲು ಶಿವಪ್ರಕಾಶ್​​​ರೊಂದಿಗೆ ಆತ್ಮೀಯವಾಗಿದ್ದ ರಾಗಿಣಿ ನಂತರ ರವಿ ಎಂಬಾತನೊಂದಿಗೆ ಹೆಚ್ಚು ಓಡಾಡುತ್ತಿದ್ದು, ಈ ಸಂಬಂಧ ಮೊನ್ನೆ ಶಿವಪ್ರಕಾಶ್ ಹಾಗೂ ಆರ್​​​​ಟಿಒ ಅಧಿಕಾರಿ ರವಿ ಇಬ್ಬರೂ ರೆಸಿಡೆನ್ಸಿ ರಸ್ತೆಯಲ್ಲಿರುವ ರಿಟ್ಜ್ ಕಾರ್ಲ್ಟನ್ ಹೋಟೆಲ್​​​​​​​​​​​​​​​​​​​​​​​ನಲ್ಲಿ ನಟಿ ಎದುರೇ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ. ಗಲಾಟೆ ನಂತರ ಶಿವಪ್ರಕಾಶ್​​​ನನ್ನು ಬೌನ್ಸರ್​​​​​​​ಗಳು ಕರೆದೊಯ್ಯತ್ತಿರುವ ದೃಶ್ಯ ರಿಟ್ಜ್ ಕಾರ್ಲ್ಟನ್ ಹೋಟೆಲ್​​ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಮೂವರಿಗೂ ನೋಟಿಸ್ ಜಾರಿ ‌ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا