Urdu   /   English   /   Nawayathi

ಹಣ ಹೆಕ್ಕಲು ಮೆಟ್ರೋ ಹಳಿಗೆ ಜಿಗಿದ ಮಹಿಳೆ ಅದೃಷ್ಟವಶಾತ್‌ ಪಾರು

share with us

ಹೊಸದಿಲ್ಲಿ: 12 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಮೆಟ್ರೋ ಹಳಿಯ ಮೇಲೆ ಬಿದ್ದಿದ್ದ ತನ್ನ ಹಣವನ್ನು ಹೆಕ್ಕಲು ಹಳಿಗೆ ಜಿಗಿದ ಮಹಿಳೆ ಅದೃಷ್ಟವಶಾತ್‌ ಜೀವ ಸಹಿತ ಪಾರಾದ ಘಟನೆ ಇಂದು ಮಂಗಳವಾರ ದಿಲ್ಲಿಯ ದ್ವಾರಕ ಮೋರ್‌ ಸ್ಟೇಶನ್‌ ನಲ್ಲಿ ನಡೆದಿದೆ. ಈ ಘಟನೆಯಿಂದಾಗಿ ದಿಲ್ಲಿ  ಮೆಟ್ರೋ ಬ್ಲೂ ಲೈನ್‌ ಸೇವೆಯು ಸ್ವಲ್ಪ ಕಾಲ ಬಾಧಿತವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಹಣ ಹೆಕ್ಕಲು ರೈಲು ಹಳಿಗೆ ಜಿಗಿದ ಮಹಿಳೆ, 24ರ ಹರೆಯದ, ನಗರದ ಜರೋಡಾ ಕಲಾನ್‌ ಪ್ರದೇಶದ ನಿವಾಸಿ ಎಂದು ಗೊತ್ತಾಗಿದೆ. ಅದೃಷ್ಟವಶಾತ್‌ ಜೀವ ಸಹಿತ ಪಾರಾದ ಈಕೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಡಿಎಂಆರ್‌ಸಿ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಇಂದು ಮಂಗಳವಾರ ಬೆಳಗ್ಗೆ 10.40ರ ಸುಮಾರಿಗೆ ಈ ಘಟನೆ ನಡೆದಿದೆ. ಮೆಟ್ರೋ ಹಳಿಯ ಮೇಲೆ ಬಿದ್ದಿದ್ದ ತನ್ನ ಹಣ ಹೆಕ್ಕಲು ಮಹಿಳೆ ಹಳಿಗೆ ಜಿಗಿದಳು ಎಂದು ಓರ್ವ ಮೆಟ್ರೋ ಅಧಿಕಾರಿ ತಿಳಿಸಿದರೆ, ನೋಯ್ಡಾ ಕಡೆಗೆ ಹೋಗುವ ಮೆಟ್ರೋ ರೈಲು ಪ್ಲಾಟ್‌ ಫಾರ್ಮ್ ಕಡೆಗೆ ಬರುತ್ತಿದ್ದಂತೆಯೇ ಮಹಿಳೆ ಹಳಿಯ ಮೇಲೆ ಜಿಗಿದಿದ್ದಳು ಮತ್ತು ಸಕಾಲದಲ್ಲಿ ಆಕೆಯನ್ನು ಪಾರುಗೊಳಿಸಲಾಯಿತು  ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ. ಘಟನೆಯಂದ ಸೇವೆ ಬಾಧಿತವಾದ ಬ್ಲೂ ಲೈನ್‌ ಮೆಟ್ರೋ, ದಿಲ್ಲಿಯ ದ್ವಾರಕಾ ಸೆಕ್ಟರ್‌ 21ನ್ನು ನೋಯ್ಡಾ ಇಲೆಕ್ಟ್ರಾನಿಕ್‌ ಸಿಟಿಯನ್ನು ಸಂಪರ್ಕಿಸುತ್ತದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا