Urdu   /   English   /   Nawayathi

ಮೋದಿ ತವರಲ್ಲಿ ಮೊದಲ ‘ರಾಜಕೀಯ’ ಭಾಷಣ ಮಾಡಿದ ಪ್ರಿಯಾಂಕಾ ಹೇಳಿದ್ದೇನು..?

share with us

ಅಹಮದಾಬಾದ್: 12 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಲೋಕಸಭಾ ಚುನಾವಣೆ ಕಾವೇರುತ್ತಿದ್ದು, ಕಾಂಗ್ರೆಸ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟೂರು ಗುಜರಾತ್‍ನಲ್ಲಿ ಇಂದು ವಿದ್ಯುಕ್ತವಾಗಿ ಚುನಾವಣಾ ಪ್ರಚಾರ ಆರಂಭಿಸಿತು. ಇಲ್ಲಿನ ಸಬರಮತಿ ಆಶ್ರಮದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಮುಖಂಡರು ಚುನಾವಣಾ ಪ್ರಚಾರ ಅಭಿಯಾನವನ್ನು ಆರಂಭಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ನಂತರ ಪ್ರಿಯಾಂಕಾ ಗಾಂಧಿ ಇದೇ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಈ ದೇಶ ಪ್ರೀತಿ, ಸಾಮರಸ್ಯ ಮತ್ತು ಸಹೋದರತ್ವದ ಅಡಿಪಾಯಗಳ ಮೇಲೆ ನಿರ್ಮಾಣವಾಗಿದೆ. ಆದರೆ, ಪ್ರಸ್ತುತ ದೇಶದಲ್ಲಿ ಏನಾಗುತ್ತಿದೆ ಎಂಬುದು ತುಂಬಾ ದುಃಖದ ಸಂಗತಿ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು. ಪ್ರಸ್ತುತ ಚುನಾವಣೆ ನಿಖರವಾಗಿ ಏನೆಂಬುದನ್ನು ನೀವು ಯೋಚಿಸಬೇಕು. ಈ ಚುನಾವಣೆಯಲ್ಲಿ ನೀವು ಏನನ್ನು ಆಯ್ಕೆ ಮಾಡಲಿದ್ದೀರಿ? ಎಂದು ಪ್ರಿಯಾಂಕಾ ಜನರನ್ನು ಪ್ರಶ್ನಿಸಿದರು. ನಿಮ್ಮ ಭವಿಷ್ಯವನ್ನು ನೀವು ಆಯ್ಕೆ ಮಾಡಲಿದ್ದೀರಿ. ನಿಷ್ಪ್ರಯೋಜಕ ಸಮಸ್ಯೆಗಳನ್ನು ಬೆಳೆಸಬಾರದು. ಚರ್ಚಿಸಬೇಕಾದ ವಿಷಯಗಳು ನಿಮಗಾಗಿ ಅತ್ಯಂತ ಪ್ರಮುಖವಾದದ್ದು ಮತ್ತು ನೀವು ಹೇಗೆ ಮುಂದುವರಿಯಬಹುದು ಎಂಬುದನ್ನು ಒಳಗೊಂಡಿರಬೇಕು ಎಂದು ಕಿವಿಮಾತು ಹೇಳಿದರು.

ನಿಮ್ಮ ಮತವೇ ಅಸ್ತ್ರ. ಆಲೋಚನೆ ಮಾಡಿ, ನಿರ್ಧರಿಸಿ. ನಿಮ್ಮ ಮುಂದೆ ದೊಡ್ಡ ಮಾತುಗಳನ್ನು ಆಡುತ್ತಾರೆ. ಮಾತು ನೀಡಿದಂತೆ ಉದ್ಯೋಗ ಎಲ್ಲಿ? ಮಾತು ನೀಡಿದಂತೆ ಹದಿನೈದು ಲಕ್ಷ ರುಪಾಯಿ ಎಲ್ಲಿ? ಮಹಿಳೆಯರ ಸುರಕ್ಷತೆ ಬಗ್ಗೆ ಎಲ್ಲಿ? ಎಂದು ಪ್ರಶ್ನಿಸುವ ಮೂಲಕ ಮೋದಿಗೆ ಟಾಂಗ ನೀಡಿದರು. ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡಲಾಗುತ್ತಿದೆ. ಎಲ್ಲಾದರೂ ನೋಡಿ, ದ್ವೇಷ ಹಬ್ಬಲಾಗುತ್ತಿದೆ. ನಾನು ಹಾಗೂ ನೀವು ಸೇರಿ ಈ ದೇಶ ರಕ್ಷಿಸುವುದಕ್ಕಿಂತ ಹೆಚ್ಚಿನದು ನಮಗಿಲ್ಲ. ಅದಕ್ಕಾಗಿ ಕೆಲಸ ಮಾಡೋಣ. ಮುಂದಕ್ಕೆ ಹೆಜ್ಜೆ ಇಡೋಣ ಎಂದು ಕರೆಕೊಟ್ಟರು. ಪಕ್ಷದ ಮುಖಂಡರಾದ ಎ.ಕೆ.ಆಯಂಟನಿ, ಗುಲಾಂನಬಿ ಆಜಾದ್, ಅಹಮ್ಮದ್ ಪಟೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್, ಪಾಂಡಿಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ತರುಣ್ ಗೋಗಯ್, ಹರೀಶ್ ರಾವತ್, ಓಮನ್ ಛಾಂಡಿ ಸೇರಿದಂತೆ ಅನೇಕರು ಗಾಂಧಿ ಪ್ರತಿಮೆಗೆ ನಮನ ಸಲ್ಲಿಸಿ ಸತ್ಯ, ಅಹಿಂಸೆ ತತ್ತ್ವಾದರ್ಶ ಪಾಲನೆಯ ಸಂಕಲ್ಪದೊಂದಿಗೆ ಚುನಾವಣಾ ಪ್ರಚಾರಕ್ಕೆ ಬಿರುಸು ನೀಡಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا