Urdu   /   English   /   Nawayathi

ಆಗುಂಬೆ ಘಾಟ್ ದುರಸ್ತಿ, ಮಾರ್ಚ್ 1ರಿಂದ 31ರವರೆಗೆ ವಾಹನ ಸಂಚಾರ ನಿಷೇಧ

share with us

ಶಿವಮೊಗ್ಗ: 23 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಗೆ ಸೇರಿರುವ ಆಗುಂಬೆ ಘಾಟ್ ರಸ್ತೆಯ ದುರಸ್ತಿ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ 31ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏಕ ಕಾಲದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ಎಯ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಮಾರ್ಚ್ ಒಂದು ತಿಂಗಳ ಕಾಲ ಅಥವಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿಷೇಧಿಸುವುದಾಗಿ ತಿಳಿಸಿದ್ದಾರೆ.

ಬಸ್ ಸಂಚಾರ ಬದಲಿ ದಾರಿ ಯಾವುದು?

ಸಾಮಾನ್ಯ ವಾಹನಗಳು, ಜೀಪು, ವ್ಯಾನ್, ಮಿನಿ ವ್ಯಾನ್ ಹಾಗೂ ದ್ವಿ ಚಕ್ರ ವಾಹನಗಳು ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಾಘಾಟ್, ಕಾರ್ಕಳ ಮಾರ್ಗವಾಗಿ ಉಡುಪಿಗೆ(ರಾಷ್ಟ್ರೀಯ ಹೆದ್ದಾರಿ 169) ಬರುವುದು. 

ಭಾರೀ ವಾಹನಗಳ ಬದಲಿ ಮಾರ್ಗ: ರಾಜಹಂಸ, ಐರಾವತ ಬಸ್ಸುಗಳು, ಖಾಸಗಿ ಲಕ್ಸುರಿ ಬಸ್ ಗಳು, ಬುಲೆಟ್ ಟ್ಯಾಂಕರ್ ಗಳು, ಶಿಪ್ ಕಾರ್ಗೋ, ಕಂಟೈನರ್, ದೊಡ್ಡ ಚಾಸೀಸ್ ಗಳು ತೀರ್ಥಹಳ್ಳಿ, ಮಾಸ್ತಿಕಟ್ಟೆ, ಹೊಸಂಗಡಿ, ಸಿದ್ದಾಪುರ, ಕುಂದಾಪುರ ಮಾರ್ಗವಾಗಿ ಉಡುಪಿಗೆ ತಲುಪುವುದು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا