Urdu   /   English   /   Nawayathi

ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ಯಶವಂತಪುರದಿಂದ ನಿರ್ಗಮನಕ್ಕೆ ಒತ್ತಾಯ

share with us

ಬೆಂಗಳೂರು: 17 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ರೈಲು ಬಾಣಸವಾಡಿ ಬದಲು ಯಶವಂತಪುರದಿಂದ ನಿರ್ಗಮಿಸಬೇಕು ಎಂದು ಕರ್ನಾಟಕ-ಕೇರಳ ಪ್ರಯಾಣಿಕರ ವೇದಿಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದೆ. ಫೆಬ್ರವರಿ 4ರಂದು ರೈಲಿನ ನಿರ್ಗಮ ಕೇಂದ್ರವನ್ನು ಬಾಣಸವಾಡಿಗೆ ವರ್ಗಾಯಿಸಲಾಗಿದೆ. ಕರ್ನಾಟಕ ಪ್ರವಾಸಿ ಕಾಂಗ್ರೆಸ್ ನ ಕಾರ್ಯಕಾರಿ ಅಧ್ಯಕ್ಷ ವೇಣು ಥೋಮಸ್, ಖಾಸಗಿ ಬಸ್ ಗಳ ಲಾಬಿಗೆ ರೈಲ್ವೆ ಅಧಿಕಾರಿಗಳು ಮಣಿಯುತ್ತಿದ್ದಾರೆ. ಕಣ್ಣೂರಿಗೆ ರೈಲಿನ ಟಿಕೆಟ್ ದರ 400 ರೂಪಾಯಿ, ಬಸ್ಸು ಪ್ರಯಾಣದ ವೆಚ್ಚ 900 ರೂಪಾಯಿಯಾಗಿದೆ. ಯಶವಂತಪುರ ಸುತ್ತಮುತ್ತ ಇರುವವರು ಈ ರೈಲಿನಲ್ಲಿ ಪ್ರಯಾಣಿಸಲು 300ರಿಂದ 400 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಯಶವಂತಪುರಕ್ಕೆ ಮೆಟ್ರೊ ಮತ್ತು ಇತರ ವಾಹನಗಳ ಸಂಚಾರ ವ್ಯವಸ್ಥೆ ಚೆನ್ನಾಗಿದೆ, ಆದರೆ ಬಾಣಸವಾಡಿಗೆ ಆ ವ್ಯವಸ್ಥೆಯಿಲ್ಲ, ಇದರಿಂದ ಪ್ರಯಾಣಿಕರಿಗೆ ಅಲ್ಲಿಗೆ ಹೋಗಲು ಕಷ್ಟವಾಗುತ್ತಿದೆ ಎಂದರು. ಯಶವಂತಪುರದಿಂದ ರೈಲು ಹೊರಟರೆ ಸಾಕಷ್ಟು ಪ್ರಯಾಣಿಕರಿರುತ್ತಾರೆ, ಆದರೆ ಬಾಣಸವಾಡಿಯಿಂದ ನಿರ್ಗಮಿಸುವಾಗ ಅರ್ಧದಷ್ಟು ಪ್ರಯಾಣಿಕರು ಕೂಡ ಇರುವುದಿಲ್ಲ. ಖಾಸಗಿ ಬಸ್ಸುಗಳಲ್ಲಿ ಸಾಕಷ್ಟು ಜನರಿರುತ್ತಾರೆ. ಯಶವಂತಪುರದಿಂದ ರಾತ್ರಿ 8.25ಕ್ಕೆ ನಿರ್ಗಮಿಸುತ್ತಿದ್ದ ರೈಲು ಬಾಣಸವಾಡಿಯಿಂದ 2-3 ಗಂಟೆ ತಡವಾಗಿ ಹೋಗುತ್ತದೆ ಎನ್ನುತ್ತಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದರು. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا