Urdu   /   English   /   Nawayathi

ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿಲ್ಲ; ನಿವೃತ್ತ ಏರ್ ಮಾರ್ಷಲ್

share with us

ಬೆಂಗಳೂರು: 17 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಯಾವುದೇ ಹಗರಣ ನಡೆದಿಲ್ಲ, ಈಗ ವಿವಾದವಾಗುತ್ತಿರುವುದು ಆರಂಭದ ಹಂತದಲ್ಲಿ ಮಾಡಿದ ತಪ್ಪುಗಳು ಎಂದು ನಿವೃತ್ತ ಏರ ಮಾರ್ಷಲ್ ಬಿ ಕೆ ಮುರಳಿ ಹೇಳಿದ್ದಾರೆ. ಅವರು ನಿನ್ನೆ ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿ, ದೇಶದಲ್ಲಿ ಯಾವುದೇ ಅಸ್ಥಿತ್ವವನ್ನು ಹೊಂದಿಲ್ಲದವರು ಅನಗತ್ಯವಾಗಿ ರಫೆಲ್ ಒಪ್ಪಂದದಲ್ಲಿ ವಿವಾದ ಸೃಷ್ಟಿಮಾಡುತ್ತಿದ್ದಾರೆ. ಅನಗತ್ಯವಾಗಿ ಈ ವಿಚಾರದಲ್ಲಿ ಮೂಗು ತೂರಿಸಲು ಯತ್ನಿಸಿದಾಗ ವಿವಾದ ಸೃಷ್ಟಿಯಾಗಿದೆ. ಭಾರತ ಮತ್ತು ಫ್ರಾನ್ಸ್ ನಡುವೆ ನಡೆದ ಒಪ್ಪಂದದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಇದು ಸರ್ಕಾರ-ಸರ್ಕಾರದ ಮಧ್ಯೆ ಆದ ಒಪ್ಪಂದ ಎಂದರು. ಯುದ್ಧ ವಿಮಾನ ಒಪ್ಪಂದದಿಂದ ಭಾರತದಲ್ಲಿ ಕಂಪೆನಿಗಳು ಮತ್ತು ಕೈಗಾರಿಕೆಗಳು ಹೆಚ್ಚಲು ಕಾರಣವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ರಫೆಲ್ ಯುದ್ಧ ವಿಮಾನಕ್ಕೆ ಉಪಕರಣಗಳನ್ನು ಒದಗಿಸಲು ಈಗಾಗಲೇ 72 ಕಂಪೆನಿಗಳನ್ನು ಗುರುತಿಸಲಾಗಿದೆ ಎಂದರು. ಒಪ್ಪಂದದಲ್ಲಿ ಎನ್ ಡಿಎ ಸರ್ಕಾರ ಮಾಡಿರುವ ತಪ್ಪುಗಳನ್ನು ಹೇಳಿದ ಅವರು, ಕೆಲವು ವೈಪರೀತ್ಯಗಳು ನಡೆದಿವೆ ಎಂದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا