Urdu   /   English   /   Nawayathi

ಆತಂಕದಲ್ಲಿದ್ದ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ..!

share with us

ಬೆಂಗಳೂರು: 17 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಲಿಮಿಟೆಡ್(ಬಿಎಸ್‍ಎನ್‍ಎಲ್) ಬಂದ್ ಆಗಲಿದೆ ಎಂಬ ಮಾಧ್ಯಮ ವರದಿಯನ್ನು ಸಂಸ್ಥೆ ತಳ್ಳಿ ಹಾಕಿದೆ. ಬಿಎಸ್‍ಎನ್‍ಎಲ್‍ನ್ನು ಮುಚ್ಚುವ ಪ್ರಸ್ತಾಪ ಅಥವಾ ಪರಿಗಣನೆ ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆಯ ಮುಂದೆ ಇಲ್ಲ ಎಂದು ಕರ್ನಾಟಕ ವೃತ್ತದ ಮುಖ್ಯ ಜನರಲ್ ಮ್ಯಾನೆಜರ್(ದೂರಸಂಪರ್ಕ) ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಬಿಎಸ್‍ಎನ್‍ಎಲ್ ಬೃಹತ್ ಮೂಲಸೌಕರ್ಯದೊಂದಿಗೆ ದೇಶದ ಹೆಮ್ಮೆಯ ದೂರಸಂಪರ್ಕ ಸೇವೆಯನ್ನು ಅದರಲ್ಲೂ ಗ್ರಾಮಾಂತರ ಪ್ರದೇಶಗಳಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸುತ್ತಾ ಮಾನ್ಯತೆ ಪಡೆದಿದೆ. ಇಂತಹ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಮುಚ್ಚಲಾಗುತ್ತದೆ ಎಂಬ ಕೆಲವು ಪತ್ರಿಕೆಗಳು ಮತ್ತು ವಿದ್ಯುಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಆದರೆ ಇದು ನಿಜವಲ್ಲ. ಈ ರೀತಿಯ ಪ್ರಸ್ತಾವನೆ-ಪರಿಗಣನೆ ಕೇಂದ್ರ ಸರಕಾರದ ಮುಂದೆ ಇಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ. ಬಿಎಸ್‍ಎನ್‍ಎಲ್ ತನ್ನ ಸಾಮಥ್ರ್ಯ ಮತ್ತು ವಿಸ್ತರಣೆಯನ್ನು ಮತ್ತಷ್ಟು ವೃದ್ಧಿಕೊಳ್ಳುತ್ತಿದೆ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ಮುಂದುವರೆಸುತ್ತಿದ್ದೆ ಎಂದು ಕರ್ನಾಟಕ ವೃತ್ತದ ಮುಖ್ಯಸ್ಥರು ಸ್ಪಷ್ಟ ಪಡಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا