Urdu   /   English   /   Nawayathi

ಪುಲ್ವಾಮಾ ದಾಳಿ ಬೆನ್ನಲ್ಲೇ ಜಾಧವ್ ಕುರಿತ ಐಸಿಜೆ ತೀರ್ಪಿಗೆ ನಾವು ಬದ್ದ ಎಂದ ಪಾಕ್

share with us

ಇಸ್ಲಾಮಾಬಾದ್: 16 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಪುಲ್ವಾಮಾ ದಾಳಿಯ ಬೆನ್ನಲ್ಲೇ ಕುಲಭೂಷಣ್ ಜಾಧವ್  ಪ್ರಕರಣದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡುವ ತೀರ್ಮಾನವನ್ನು ಜಾರಿಗೆ ತರಲು ಪಾಕಿಸ್ತಾನ ಬದ್ದವಾಗಿದೆದು ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿ 18ರಿಂದ ಐಸಿಜೆನಲ್ಲಿ ನಡೆಯಲಿರುವ ವಿಚಾರಣೆಗಾಗಿ ಪಾಕ್ ನಿಯೋಗವು ಶುಕ್ರವಾರ ಹೇಗ್ ಗೆ ತಲುಪಿದೆ. ಭಾರತ ಮೂಲದ ಜಾಧವ್ ಬೇಹುಗಾರಿಕೆ, ಭಯೋತ್ಪಾದನೆ ಆರೋಪದ ಮೇಲೆ ಏಪ್ರಿಲ್ 2017ರಲ್ಲಿ ಪಾಕ್ ಜೈಲಿನಲ್ಲಿದ್ದು ಅಲ್ಲಿನ ಸೈನಿಕ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಅದೇ ವರ್ಷ ಮೇನಲ್ಲಿ ಭಾರತ ಜಾಧವ್ ಮರಣದಂಡನೆ ತೀರ್ಪನ್ನು ವಿರೋಧಿಸಿ ಐಸಿಜೆ ಮೆಟ್ಟಿಲೇರಿತ್ತು. ಮೇ 18, 2017 ರಂದು ಐಸಿಜಿಯ 10 ಸದಸ್ಯರ ಪೀಠವು ಜಾಧವ್ ಮರಣದಂಡನೆ ತೀರ್ಪಿಗೆ ತಡೆ ನೀಡಿದೆ. ಪಾಕಿಸ್ತಾನದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಪಾಕಿಸ್ತಾನದ ನಿಯೋಗವನ್ನು ಐಸಿಜೆನಲ್ಲಿ ನಿರ್ವಹಿಸಿಅಲಿದ್ದಾರೆ.ದಕ್ಷಿಣ ಏಷ್ಯಾ ಡೈರೆಕ್ಟರ್ ಜನರಲ್ ಮೊಹಮ್ಮದ್ ಫೈಸಲ್ ಅವರು  ಭಾರತ ವಿದೇಶಾಂಗ ಕಛೇರಿಯ ಪರ ಇರಲಿದ್ದಾರೆ. ಫೆಬ್ರವರಿ 18 ರಿಂದ 21 ರ ತನಕ ಐಸಿಜೆನಲ್ಲಿ ಜಾಧವ್ ಕುರಿತ ಪ್ರಕರಣ ವಿಚಾರಣೆಗೆ ಬರಲಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا