Urdu   /   English   /   Nawayathi

ಕುಂದಾಪುರ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ

share with us

ಕುಂದಾಪುರ: 28 ಜನುವರಿ (ಫಿಕ್ರೋಖಬರ್ ಸುದ್ದಿ) ಕುಂದಾಪುರದ ಭಂಡಾರ್ಕರ್ಸ್ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಹಗಲಿನ ವೇಳೆ ಹೊಡೆದಾಡುವ ದೃಶ್ಯ ಗಾಂಧಿ ಮೈದಾನದ ರಸ್ತೆಯಲ್ಲಿ ಇಂದು ಮಧ್ಯಾಹ್ನ ಕಂಡು ಬಂದಿದ್ದು, ಸಾರ್ವಜನಿಕರಿಗೆ ಹಿಂದಿನ ದಿನಗಳಲ್ಲಿ ನಡೆದ ಗಲಾಟೆಯನ್ನು ಪುನಃ ನೆನಪಿಸುವಂತೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಹಾಡುಹಗಲೇ ಕಾಲೇಜಿನ ರಸ್ತೆಯಲ್ಲಿ ಇಬ್ಬರ ಮೇಲೆ ಸಾಮೂಹಿಕವಾಗಿ ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಂಡು ಬಿಡಿಸಲು ಹೋದ ಇತರ ವಿದ್ಯಾರ್ಥಿಗಳಿಗೂ ಹೊಡೆದಿದ್ದಾರೆ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳು ಅಕ್ಷಯ್ ಮತ್ತು ಮಿಥುನ್ ಎಂದು ಹೇಳಲಾಗಿದ್ದು, ಹಲ್ಲೆ ನಡೆಸಿದ ತಂಡ ಗಣೇಶ್ ಹಾಗೂ ಈತನ ಮಿತ್ರರು ಎನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಕುಂದಾಪುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا