Urdu   /   English   /   Nawayathi

ಭಟ್ಕಳದ ಪುರವರ್ಗದಲ್ಲಿ ತಮ್ಮ ಕೈಚಳಕ ತೋರಿಸಿದ ಖದೀಮರು

share with us

ಭಟ್ಕಳ: 20 ಜನುವರಿ (ಫಿಕ್ರೋಖಬರ್ ಸುದ್ದಿ) ಭಟ್ಕಳದ ಪುರವರ್ಗದಲ್ಲಿರುವ ಮನೆಯೊಂದರಲ್ಲಿ ಶನಿವಾರದಂದು ಕಳ್ಳತನವಾಗಿದ್ದು ಸುಮಾರು 40,000 ರೂಪಾಯಿಗಳನ್ನು ದೋಚಿದ್ದಾರೆ. ಮನೆಯ ಮಾಲೀಕರಾದ ಮುಹಮ್ಮದ್ ಇಸ್ಮಾಯಿಲ್ ಜಬಾಲಿ ಅವರು ಬುಧವಾರದಂದು ತಮ್ಮ ಪತ್ನಿಯ ಜೊತೆ ಅಳ್ವಾ ಸ್ಟ್ರೀಟಿನಲ್ಲಿರುವ ತಮ್ಮ ಮಗಳ ಮನೆಗೆ ಹೋದ ವೇಳೆ ಈ ಕಳ್ಳತನ ನಡೆದಿದೆ ಎಂದು ತಿಳಿದು ಬಂದಿದೆ. ಇಸ್ಮಾಯಿಲ್ ಅವರು ಶನಿವಾರದಂದು ತಮ್ಮ ಮನೆಗೆ ಮರಳಿದ ವೇಳೆ ಮನೆಯ ಬಾಗಿಲು ಮುರಿದಿರುವುದನ್ನು ಕಂಡು ತಕ್ಷಣ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ ನಂತರ ಪೋಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ತಲುಪಿದ ಪೋಲೀಸರು ಪರಿಶೀಲಿಸಿದಾಗ ಮನೆಯಲ್ಲಿದ್ದ ಕಪಾಟು ಮುರಿದಿದ್ದು, ಕಪಾಟು ಹಾಗೂ ಬಾಗಿಲುಗಳನ್ನು ಮುರಿಯಲು ಬಳಸಿದ ಪಿಕಾಸು ದೊರಕಿದೆ. ಮನೆಯಲ್ಲಿದ್ದ 40,000ರೂ ನಗದು ಹಣ ಕಳ್ಳತನವಾಗಿರುವುದು ತಿಳಿದು ಬಂದಿದೆ. ಪ್ರಕರಣ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا