Urdu   /   English   /   Nawayathi

ಬಿಬಿಎಂಪಿ ಅನುಪಯುಕ್ತ ಸರ್ಕಾರಿ ಜಾಗ, ಕಟ್ಟಡಗಳು, ಆಸ್ಪತ್ರೆಗಳಲ್ಲಿ ವಸತಿ ಹೀನರಿಗೆ ಆಶ್ರಯ

share with us

ಬೆಂಗಳೂರು: 20 ಜನುವರಿ (ಫಿಕ್ರೋಖಬರ್ ಸುದ್ದಿ) ರಾಜಧಾನಿ ಬೆಂಗಳೂರಿನಲ್ಲಿ ಹನ್ನೆರಡು ಅಸುರಕ್ಷಿತ ಕಟ್ಟಡಗಳು, ಮೂರು ಖಾಲಿ ಹಾಗೂ ನಿರ್ಮಾಣ ಹಂತದ ಕಟ್ಟಡಗಳು ನಿರಾಶ್ರಿತರ ತಾಣಗಳಾಗಿ ಮಾರ್ಪಾಡಾಗಲಿವೆ. ಜನವರಿ ಅಂತ್ಯದ ವೇಳೆಗೆ 15 ಕಟ್ಟಡಗಳಲ್ಲಿ ಕನಿಷ್ಟ 10 ಕಟ್ಟಡಗಳನ್ನು ಮನೆ ಇಲ್ಲದವರ ಆಶ್ರಯ ತಾಣಗಳಾಗಿ ಪರಿವರ್ತಿಸಲು ಬಿಬಿಎಂಪಿ ಗುರಿ ಹೊಂದಿದೆ. ಈ ಉದ್ದೇಶಕ್ಕಾಗಿ ಬಹುಹಂತದ ಬಿಬಿಎಂಪಿ ಕಚೇರಿಯಲ್ಲಿನ ಕೆಲ ಜಾಗವನ್ನು ಸಮಾಜ ಕಲ್ಯಾಣ ಇಲಾಖೆ ಗುರುತಿಸಿದೆ. ಸ್ವಯಂ ಸೇವಾ ಸಂಸ್ಥೆಗಳು ಕೂಡಾ ಮಹಿಳೆಯರು ಹಾಗೂ ವಯಸ್ಸಾದ ಹಿರಿಯ ನಾಗರಿಕರಾಗಿ ಆಶ್ರಯ ಒದಗಿಸಿವೆ. ಪಶ್ಚಿಮ ವಲಯದಲ್ಲಿ ಗೂಡ್ ಶೇಡ್ ರಸ್ತೆಯಲ್ಲಿನ ಬಿಬಿಎಂಪಿ ಕಚೇರಿಯಲ್ಲಿ 132 ಜನರಿಗೆ ಆಶ್ರಯ ಒದಗಿಸಬಹುದು.ದಕ್ಷಿಣ ವಲಯದಲ್ಲಿನ  ಕೆ.ಆರ್ ಮಾರುಕಟ್ಟೆಯ ಎರಡನೇ ಅಂತಸ್ತಿನಲ್ಲಿ 5 ಸಾವಿರ ಜನರಿಗೆ ಆಶ್ರಯ  ನೀಡಬಹುದು, ಗಿರಿರಾಮ  ಹೆರಿಗೆ ಆಸ್ಪತ್ರೆಯಲ್ಲಿ 60 ಮಹಿಳೆಯರಿಗೆ  ಆಶ್ರಯ ದೊರಕಿಸಲಾಗುವುದು, ಜೆಸಿ ರಸ್ತೆಯಲ್ಲಿನ ಬಹು ಹಂತದ ಕಾರ್ ಪಾರ್ಕಿಂಗ್  ಸ್ಥಳದಲ್ಲಿ 40 ಜನರಿಗೆ ಆಶ್ರಯ ಒದಗಿಸಬಹುದು ಎಂದು  (ಕಲ್ಯಾಣ ಇಲಾಖೆ )  ಉಪ ಆಯುಕ್ತ ಜಗದೀಶ್ ಹೇಳಿದ್ದಾರೆ. ಆನೇಪಾಳ್ಯ, ಶಾಂತಿನಗರದಲ್ಲಿ ಈಗಾಗಲೇ  ಆಶ್ರಯ ಕಲ್ಪಿಸಿರುವ  ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಳ್ಳಲಿದೆ. ಹೆಣ್ಣೂರಿನ ಹೊಲಿ ಕ್ರಾಸ್ ಮಾರ್ಸಿ ಆಶ್ರಯದಲ್ಲಿ 16 ಮಹಿಳೆಯರಿಗೆ, ಕಲಾಸಿಪಾಳ್ಯದ ಮಾರಿಯಮ್ಮ ದೇವಾಲಯದಲ್ಲಿ ಒಂದು ರಾತ್ರಿಗೆ 20 ರೂ. ವೆಚ್ಚದಲ್ಲಿ 100 ರಿಂದ 150 ಜನರಿಗೆ ಈಗಾಗಲೇ ಆಶ್ರಯ ಒದಗಿಸಲಾಗಿದ್ದು, ಅವರಿಗೆ ಸೂಕ್ತ ಬೇಡ್ ವ್ಯವಸ್ಥೆ ಕೂಡಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾರ್ಚ್ 31ರೊಳಗೆ ಇಂತಹ 30 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ ರಂದೀಪ್  ತಿಳಿಸಿದ್ದಾರೆ. ಮೆಜೆಸ್ಟಿಕ್, ಮಾರ್ಕೆಟ್  ಸೇರಿದಂತೆ ಮನೆ ಇಲ್ಲದವರು ಹೆಚ್ಚಾಗಿರುವ ಸ್ಥಳಗಳಲ್ಲಿ ಇಂತಹ ಕೇಂದ್ರಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯಲಹಂಕದ ಜಕ್ಕೂರು ವಾರ್ಡಿನಲ್ಲಿ ಆಶ್ರಯ ಕೇಂದ್ರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕ್ವಿನ್ಸ್ ರಸ್ತೆ, ಸುಮ್ಮನಹಳ್ಳಿ. ಹೂಡಿ, ಮತ್ತಿತರ ಕಡೆಗಳಲ್ಲಿ ಮನೆ ಇಲ್ಲದವರಿಗೆ ಆಶ್ರಯ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. 10 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರ, ಪಟ್ಟಣಗಳಲ್ಲಿ ಮನೆ ಇಲ್ಲದವರಿಗೆ ರಾಜ್ಯಸರ್ಕಾರವೇ  ಆಶ್ರಯ ಒದಗಿಸಬೇಕೆಂದು ಸುಪ್ರೀಂಕೋರ್ಟ್  2010 ರಲ್ಲಿ ನಿರ್ದೇಶನ ನೀಡಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا