Urdu   /   English   /   Nawayathi

85ಕೆಜಿ ತೂಕದ ಈ ಒಂದು ಹೈಜೆನಿಕ್ ಫಿಷ್’ನ ಬೆಲೆ ಎಷ್ಟು ಗೊತ್ತೇ..?

share with us

ಬೆಂಗಳೂರು: 20 ಜನುವರಿ (ಫಿಕ್ರೋಖಬರ್ ಸುದ್ದಿ) ಮೀನು ಪ್ರಭೇದಗಳಲ್ಲಿ ಅತಿ ಹೆಚ್ಚು ಹೈಜೆನಿಕ್ ಆಗಿರುವ ಎಲ್ಲೋ ಫಿನ್ ಟುನಾ ತಳಿಯ ಭಾರೀ ಗಾತ್ರದ ಮೀನು ತಮಿಳುನಾಡಿನ ಸಮುದ್ರದಲ್ಲಿ ಸಿಕ್ಕಿದ್ದು, ಅದನ್ನು ನಗರದ ಮೀನು ಮಾಲೀಕರೊಬ್ಬರು ತರಿಸಿದ್ದಾರೆ. ಬರೋಬ್ಬರಿ 85 ಕೆಜಿ ತೂಕದ ಎಲ್ಲೋ ಫಿನ್ ಟುನಾ ತಳಿಯ ಮೀನನ್ನು ಜಪಾನ್ ದೇಶದಲ್ಲಿ ಹೈಜೆನಿಕ್ ಫಿಷ್ ಎಂದು ಪರಿಗಣಿಸಿದ್ದು, ವಿವಿಧ ಖಾದ್ಯಗಳನ್ನು ತಯಾರಿಸುತ್ತಾರೆ. ಇದರ ಪೌಷ್ಠಿಕಾಂಶ ಹಾಗೂ ಔಷಧೀಯ ಗುಣಗಳಿಂದ ಇದಕ್ಕೆ ಬೇಡಿಕೆ ಹೆಚ್ಚಿದೆ. ಒಂದು ಕೆಜಿಯಿಂದ ಐದು ಕೆಜಿವರೆಗೂ ಎಲ್ಲೋ ಫಿನ್ ಟುನಾ ಮೀನು ಸಿಗುವುದು ಸಾಮಾನ್ಯ. ಆದರೆ, 85 ಕೆಜಿಯ ಭಾರೀ ಗಾತ್ರದ ಮೀನು ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ತಮಿಳುನಾಡಿನ ಸಮುದ್ರದಲ್ಲಿ 85 ಕೆಜಿಯಎಲ್ಲೋ ಫಿನ್ ಟುನಾ ಮೀನು ಸಿಕ್ಕಿರುವುದು ಗೊತ್ತಾಗಿ ತಕ್ಷಣ ಆಸಕ್ತರಾಗಿ ಫ್ರೇಜರ್‍ಟೌನ್‍ನಲ್ಲಿರುವ ಮೌಸ್ ಫಿಷರೀಸ್ ಮಾಲೀಕರಾದ ಮಹಮ್ಮದ್ ವಾಸಿಮ್ ನಗರಕ್ಕೆ ಮೀನನ್ನು ತರಿಸಿಕೊಂಡಿದ್ದಾರೆ.

ಯಾರಾದರೂ ಇಡೀ ಮೀನನ್ನು ಕೊಳ್ಳುವುದಾದರೆ 17 ಸಾವಿರ ರೂ. ಗಳಿಗೆ ಮಾರಾಟ ಮಾಡುತ್ತೇವೆ. ಕತ್ತರಿಸಿ ಮಾರಾಟ ಮಾಡುವ ಇಚ್ಛೆಯೂ ಇದೆ. ಕತ್ತರಿಸಿ ಸ್ವಚ್ಛ ಮಾಡಿದರೆ 1 ಕೆಜಿಗೆ 500 ರೂ. ಹಾಗೆಯೇ ಕಟ್ ಮಾಡಿ ಕೊಟ್ಟರೆ ಕೆಜಿಗೆ 200ರೂ. ಎಂದು ಈ ಸಂಜೆಗೆ ವಾಸಿಮ್ ತಿಳಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا