Urdu   /   English   /   Nawayathi

ಮತ್ತೆ ಹಿಮಾಲಯ ಶ್ರೇಣಿಯಲ್ಲಿ ಭಾರೀ ಹಿಮಪಾತ, ರೆಡ್ ಅಲರ್ಟ್ ಘೋಷಣೆ

share with us

ನವದೆಹಲಿ: 20 ಜನುವರಿ (ಫಿಕ್ರೋಖಬರ್ ಸುದ್ದಿ) ಹಿಮಾಲಯ ಪರ್ವತ ಶ್ರೇಣಿಯಲ್ಲಿ ಭಾರೀ ಹಿಮ ಸುರಿಯುತ್ತಿದ್ದು, ಇನ್ನು ಒಂದು ವಾರಗಳ ಕಾಲ ಹಿಮಪಾತ ಹೆಚ್ಚಾಗಿರುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್‍ನಲ್ಲಿ ಜ.24ರಿಂದ 26ರವರೆಗೆ ಭಾರೀ ಹಿಮಪಾತ ಬೀಳಲಿದೆ ಹಾಗೂ ಮಳೆಯಾಗುವ ಸಾಧ್ಯತೆ ಇದೆ. ಗಣರಾಜ್ಯೋತ್ಸವ ರಜೆ ಇರುವುದರಿಂದ ಪ್ರವಾಸಿಗರು ಈ ತಾಣಗಳಿಗೆ ಪ್ರವಾಸ ಕೈಗೊಳ್ಳುವುದರಿಂದ ಕೆಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಿಪರೀತ ಹಿಮ ಅಥವಾ ಮಳೆ ಸುರಿಯುವ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರದವರೆಗೆ ಹಾಗೂ ಹಿಮಾಚಲ ಪ್ರದೇಶದಲ್ಲಿ ಸೋಮವಾರ ಮತ್ತು ಮಂಗಳವಾರ ರೆಡ್ ಅಲರ್ಟ್ ಘೋಷಿಸಲಾಗಿದೆ.  ಉತ್ತರಾಖಂಡ್‍ನಲ್ಲಿ ನಾಳೆ(ಸೋಮವಾರ) ಮತ್ತು ಮಂಗಳವಾರ ಭಾರೀ ಹಿಮಪಾತವಿರುತ್ತದೆ ಎಂದು ಹವಾಮಾನ ಇಲಾಖೆಯ ಮುಖ್ಯಸ್ಥ ಬಿ.ಪಿ. ಯಾದವ್ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಹಿಮಪಾತಕ್ಕೆ ಸಿಲುಕಿ ಐವರು ಮೃತಪಟ್ಟಿರುವ ಘಟನೆ ಸಹ ಕಣ್ಮುಂದೆ ಇರುವುದಿಂದ ರೆಡ್‍ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا