Urdu   /   English   /   Nawayathi

ಚಿಲಿಯಲ್ಲಿ ಬೆಳ್ಳಂಬೆಳಿಗ್ಗೆ ಭಾರಿ ಭೂಕಂಪ..!

share with us

ಸಾಂಟಿಯಾಗೋ: (ಪಿಟಿಐ): 20 ಜನುವರಿ (ಫಿಕ್ರೋಖಬರ್ ಸುದ್ದಿ) ಚಿಲಿ ದೇಶದ ಉತ್ತರ-ಮಧ್ಯ ಭಾಗದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ಇದ್ದ ಭೂಕಂಪದಿಂದ ತಕ್ಷಣಕ್ಕೆ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ. 1.32ರ ನಸುಕಿನಲ್ಲಿ ಕೊಕ್ವಿಂಬೋ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿತು. ಭೂಕಂಪದ ಕೇಂದ್ರ ಬಿಂದು ಭೂಗರ್ಭದ 53 ಕಿ.ಮೀ. ಆಳದಲ್ಲಿತ್ತು. ಲ್‍ಪರೈಸೋ, ಒಹಿಗ್ಗಿನ್ಸ್, ಅಟಕಾಮಾ ಮತ್ತು ರಾಜಧಾನಿ ಸಾಂಟಿಯಾಗೋದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ತೀವ್ರತೆಯಿಂದ ಸಹಸ್ರಾರು ಮನೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಚಿಲಿ-ವಿಶ್ವದಲ್ಲೇ ಅತಿ ಹೆಚ್ಚು ಭೂಕಂಪಕ್ಕೆ ಒಳಗಾಗುವ ದೇಶವಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا