Urdu   /   English   /   Nawayathi

ಬಿಜೆಪಿಯವರು ಭ್ರಮೆಯಿಂದ ಹೊರ ಬರಲಿ :ಸಿದ್ದರಾಮಯ್ಯ

share with us

ಕಡೂರು: 17 ಜನುವರಿ (ಫಿಕ್ರೋಖಬರ್ ಸುದ್ದಿ) ಬಿಜೆಪಿ ಮುಖಂಡರು ಇನ್ನೂ ಭ್ರಮೆಯಲ್ಲಿದ್ದಾರೆ. ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ವಿಷಯದಲ್ಲಿ ಅವರಿಗೆ ಭ್ರಮ ನಿರಸನ ಆಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗೋ ಕನಸು ಕಾಣುತ್ತಿದ್ದಾರೆ. ತುರ್ತಾಗಿ ಮುಖ್ಯಮಂತ್ರಿ ಯಾಗಬೇಕು ಎಂದು ಆಪರೇಷನ್‌ ಕಮಲಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಬೇರೆ ಪಕ್ಷದ ಶಾಸಕರಿಗೆ ಕೋಟ್ಯಂತರ ರೂ.ಆಮಿಷ ಒಡ್ಡುತ್ತಿದ್ದಾರೆ. ಇದು ಭ್ರಷ್ಟಾಚಾರದ ಹಣ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಬಹಳಷ್ಟು ಮುಖಂಡರು ಸಮ್ಮಿಶ್ರ ಸರಕಾರವನ್ನು ಇಂದು ಬೀಳಿಸುತ್ತೇವೆ, ನಾಳೆ ಬೀಳಿಸುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ಇವರ ಯಾವ ತಂತ್ರವೂ ಫಲಿಸಲ್ಲ. ಸರಕಾರಕ್ಕೆ ಯಾವ ಅಪಾಯವೂ ಇಲ್ಲ. ಕಾಂಗ್ರೆಸ್‌ನ ಯಾವ ಶಾಸಕರೂ ಹಣ ಪಡೆದು ಪಕ್ಷಾಂತರ ಮಾಡಲ್ಲ. ಬಿಜೆಪಿ ಮುಖಂಡರು ಇನ್ನಾದರೂ ಭ್ರಮೆಯಿಂದ ಹೊರ ಬರಬೇಕು ಎಂದರು. ರಾಜ್ಯದಲ್ಲಿ ಬರ ಹೆಚ್ಚಾಗಿದೆ. ನೀರಿನ ಹಾಹಾಕಾರ ಉಂಟಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಜೆಪಿ ಮುಖಂಡರಿಗೆ ರೈತರ ಕಷ್ಟವಾಗಲಿ, ಜನರ ನೋವಾಗಲಿ ಕಾಣುತ್ತಿಲ್ಲ. ಮೋಜು-ಮಸ್ತಿ ಮಾಡಲು ರೆಸಾರ್ಟ್‌ಗೆ ಹೋಗಿದ್ದಾರೆ. ಬಿಜೆಪಿಯವರದ್ದು ಕನಿಷ್ಠ ಬದಟಛಿತೆಯೂ ಇಲ್ಲದ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲ ಬಿಕ್ಕಟ್ಟಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಕಾರಣವೇ? ಅವರು ಮುಂಬೈಗೆ ತೆರಳಿ ಸರಕಾರ ಬೀಳಿಸುವ ತಂತ್ರ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, "ಜಾರಕಿಹೊಳಿ ನನ್ನ ಸ್ನೇಹಿ ತರೂ ಹೌದು. ಅವರು ಮುಂಬೈಗೆ ಹೋಗುವು ದರಲ್ಲಿ ತಪ್ಪೇನಿದೆ? ಅವರು ಸರಕಾರ ಉರುಳಿಸಲು ಯತ್ನಿಸುತ್ತಿದ್ದಾರೆ ಎಂಬುದೆಲ್ಲ ಬರೀ ಕಥೆ ಎಂದರು.

ಸಂಪುಟದ ನಾಲ್ವರು ಸಚಿವರು ರಾಜೀನಾಮೆ ನೀಡಿ ಅತೃಪ್ತರಿಗೆ ಸ್ಥಾನ ನೀಡುವಂತೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚಿಸಿ ದ್ದಾರೆಯೇ ಎಂಬ ಪ್ರಶ್ನೆಗೆ "ರಾಹುಲ್‌ಗಾಂಧಿ ಅವರಿಂದ ಅಂತಹ ಯಾವುದೇ ಸೂಚನೆ ಬಂದಿಲ್ಲ. ಆದರೆ, ಸಚಿವರೇ ತಾವು ಸ್ಥಾನ ತ್ಯಾಗ ಮಾಡಿ ಇತರರಿಗೆ ಅವಕಾಶ ಮಾಡಿಕೊಡುವ ಉದಾರತನ ತೋರಿದ್ದಾರೆ ಎಂದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا