Urdu   /   English   /   Nawayathi

ವ್ಯವಹಾರ ನಡೆಸುವರಂತೆ ನಟಿಸಿ ಆರೋಪಿಗಳನ್ನು ಬಂಧಿಸಿದ ಅರಣ್ಯಾಧಿಕಾರಿಗಳು

share with us

ಕುಂದಾಪುರ: 12 ಜನುವರಿ (ಫಿಕ್ರೋಖಬರ್ ಸುದ್ದಿ) ಗರುವಾರದಂದು ಮಧ್ಯಾಹ್ನ ಸುಮಾರು 2ಗಂಟೆಗೆ ಕೋಟೇಶ್ವರದ ಹಾಲಾಡಿ ರಸ್ತೆಯ ಜಂಕ್ಷನ್ನಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದುಬಾರಿ ಬೆಲೆ ಬಾಳುವ ಜಿಂಕೆ ಕೊಂಬು ಹಾಗೂ ಟ್ರೋಫಿ ಕೊಂಬುಗಳ ಜೊತೆ ಆರೋಪಿಗಳನ್ನು ಬೆಂಗಳೂರಿನ ಸಿ,ಐ,ಡಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ತೋನ್ಸೆ ಬುಕ್ಕೆಗದ್ದೆಯ ನಿವಾಸಿ ಉದಯ ನಾಯ್ಕ್, ಅಲ್ಬಾಡಿ ಗ್ರಾಮದ ತೋನ್ಸೆಯ ನಿವಾಸಿ ದೀಪಕ್, ಅಲ್ಬಾಡಿ ಗ್ರಾಮದ ಗುಡ್ಡೆಮನೆಯ ನಿವಾಸಿ ರವಿಚಂದ್ರ ಶೆಟ್ಟಿ, ಕುಂದಾಪುರದ ಬರೆಕಟ್ಟುವಿನ ನಿವಾಸಿ ದಿನೇಶ್ ಗಾಣಿಗ ಮತ್ತು ಬಾಳೆಹಿತ್ಲುವಿನ ನಿವಾಸಿ ರವಿ ಎಂದು ಹೇಳಲಾಗಿದೆ. ಕಳೆದ ವಾರ ಅರಣ್ಯ ಘಟಕದ ಡಿ,ವೈ,ಎಸ್,ಪಿ ಎಸ್, ಕಾಶಿ ಅವರಿಗೆ ಆರೋಪಿಗಳು ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಸಂಗ್ರಹಿಸುತ್ತಿರುವ ಮಾಹಿತಿ ದೊರಕಿದ್ದು, ಬೆಂಗಳೂರಿನ ಅರಣ್ಯ ಘಟಕದ ಸಿ,ಐ,ಡಿ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಸೇರಿ ಆರೋಪಿಗಳಿಗೆ ತಾವು ಜಿಂಕೆ ಕೊಂಬುಗಳನ್ನು ಖರೀದಿಸುತ್ತೇವೆ ಎಂದು ಕರೆ ಮಾಡಿದ ಕಾರಣ ಆರೋಪಿಗಳು ಆನಂದದಿಂದ ವ್ಯವಹಾರ ನಡೆಸಲು ಬಂದಿದ್ದಾರೆ. ಸಂದರ್ಭ ಕಾಯುತ್ತಿದ್ದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸೇರಿ ಆರೋಪಿಗಳನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಜೊತೆಗೆ 19 ಜಿಂಕೆ ಕೊಂಬು, 2 ಜಿಂಕೆ ತಲೆ ಬುರುಡೆ ಇರುವ ಟ್ರೋಫಿ ಕೊಂಬು ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ಓಮ್ನಿ ಮತ್ತು ಏಳು ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕುಂದಾಪುರದಲ್ಲಿ ಪ್ರಕರಣ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا