Urdu   /   English

ಎ,ಟಿ,ಎಂನಲ್ಲಿ ಕದಿಯಲು ವಿಫಲನಾಗಿ ಪೋಲೀಸರ ಬಲೆಗೆ ಬಿದ್ದ ಆರೋಪಿ

share with us

ಮಂಗಳೂರು: 12 ಜನುವರಿ (ಫಿಕ್ರೋಖಬರ್ ಸುದ್ದಿ) ಗುರುವಾರದಂದು ಬೆಳಗಿನ ಜಾವ ಸುಮಾರು 2ಗಂಟೆಗೆ ನಗರದ ಅತ್ತಾವರದ ಬಳಿಯ ಕಾರ್ಪೋರೇಶನ್ ಬ್ಯಾಂಕಿನ ಎ,ಟಿ,ಎಂ ಒಳಗೆ ನುಗ್ಗಿ ಮಾನಿಟರ್ ಒಡೆದು ಹಣ ಕದಿಯಲು ಯತ್ನಿಸಿದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಬೆಳಗಿನ ಜಾವ ಸುಮಾರು 2ಗಂಟೆಗೆ ಆರೋಪಿ ಎ,ಟಿಂ,ಎಂ ಒಳಗೆ ನುಗ್ಗಿ ಕಂಪ್ಯೂಟರಿನ ಮಾನಿಟರ್ ಒಡೆದು ಹಣ ಕದಿಯಲು ಯತ್ನಿಸುವುದನ್ನು ಕಂಡ ಸಾರ್ವಜನಿಕರು ತಕ್ಷಣ ಪೋಲೀಸರಿಗೆ ಕರೆ ಮಾಡಿದ್ದಾರೆ. ಮಾನಿಟರ್ ಒಡೆಯಲು ವಿಫಲನಾಗಿ ಹೊರಗಡೆ ಬಂದು ಸುಸ್ತಾಗಿ ಕುಳಿತ್ತಿದ್ದ ವೇಳೆ ಪೋಲೀಸರು ಈತನನ್ನು ಬಂಧಿಸಿ ವಿಚಾರಿಸಿದಾಗ ತಾನು ಪೇಂಟರ್ ಕೆಲಸ ಮಾಡುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಆರೋಪಿ ತೊಕ್ಕೊಟ್ಟುವಿನ ನಿವಾಸಿ ಜಯರಾಜ್(44) ಎಂದು ಗುರುತಿಸಲಾಗಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا