Urdu   /   English   /   Nawayathi

ಬಂಟ್ವಾಳದಲ್ಲಿ ಸಿಐಡಿ ಪೊಲೀಸರಿಂದ ಗಿಳಿ ಮಾರಾಟಗಾರನ ಬಂಧನ

share with us

ಮಂಗಳೂರು: 12 ಜನುವರಿ (ಫಿಕ್ರೋಖಬರ್ ಸುದ್ದಿ) ಬೆಂಗಳೂರು ಸಿಐಡಿ ಪೊಲೀಸರು ಬಂಟ್ವಾಳದಲ್ಲಿ ಗಿಳಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಅಬ್ದುಲ್ ಲತೀಫ್​ ಬಂಧಿತ ಆರೋಪಿ. ಬಂಟ್ವಾಳ ತಾಲೂಕಿನ ಮೆಲ್ಕಾರ್ ಎಂಬಲ್ಲಿ ಎರಡು ಪಂಜರಗಳಲ್ಲಿ ಸುಮಾರು 26 ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. ಈ  ವೇಳೆ ಬೆಂಗಳೂರಿನ ಸಿಐಡಿ ಎಸ್ಐ ಹೆಚ್.ಕೆ.ರವಿಕುಮಾರ್​ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಅಬ್ದುಲ್ ಲತೀಫ್​ ಈ ಹಿಂದೆ ತಮಿಳುನಾಡಿನಿಂದ ಗಿಳಿಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗುತ್ತಿದೆ. ಈ ಕುರಿತು ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳಕ್ಕೆ ಅಗಮಿಸಿದ ಬೆಂಗಳೂರು ಸಿಐಡಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಬಂಟ್ವಾಳ ವಲಯ ಅರಣ್ಯಾಧಿಕಾರಿಗೆ ಪ್ರಕರಣ ಹಸ್ತಾಂತರ ಮಾಡಿದ್ದಾರೆ.ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1072 ರಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮುಂದಿನ ತನಿಖೆಯನ್ನು ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ನಡೆಸುತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಉಪ ವಲಯ ಅರಣ್ಯಾಧಿಕಾರಿ ಯಶೋಧರ, ಪ್ರೀತಂ, ಅರಣ್ಯ ರಕ್ಷಕರಾದ ವಿನಯ್, ಜಿತೇಶ್ ಬಿ. ದಯಾನಂದ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا