Urdu   /   English   /   Nawayathi

ಮಲೇಷ್ಯಾ ರಾಜ ಪದತ್ಯಾಗ

share with us

ಕೌಲಾಲಂಪುರ: 07 ಜನುವರಿ (ಫಿಕ್ರೋಖಬರ್ ಸುದ್ದಿ) ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ ಸುಲ್ತಾನ್‌ 5ನೇ ಮೊಹಮ್ಮದ್‌ ಪಟ್ಟ ತ್ಯಜಿಸಿ, ರಷ್ಯಾದ ಯುವತಿಯನ್ನು ವಿವಾಹವಾಗಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದಲೂ ರಾಜ 5ನೇ ಮೊಹಮ್ಮದ್‌ ಪಟ್ಟ ತ್ಯಜಿಸುವ ಕುರಿತು ಊಹಾಪೋಹವೆದ್ದಿತ್ತು. ಮಲೇಷ್ಯಾದ ಅರಮನೆ ಈ ಬಗ್ಗೆ ಖಚಿತಪಡಿಸಿದ್ದು, ರಾಜೀನಾಮೆಗೆ ಯಾವುದೇ ಕಾರಣ ತಿಳಿಸಿಲ್ಲ. ಐದು ವರ್ಷಗಳ ಅವಧಿಗೆ ರಾಜನ ಅವಧಿ ಇತ್ತಾದರೂ ಎರಡೇ ವರ್ಷಕ್ಕೆ ಮೊಹಮ್ಮದ್‌ ರಾಜೀನಾಮೆ ನೀಡಿದ್ದಾರೆ. ಮೊಹಮ್ಮದ್‌ಗೆ ವಾಹನಗಳ ಬಗ್ಗೆ ಹಾಗೂ ಇತರ ಸಾಹಸ ಕ್ರೀಡೆಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಹೊಸ ರಾಜನ ಪಟ್ಟಾಭಿಷೇಕದ ಬಗ್ಗೆ ಮುಸ್ಲಿಂ ನಾಯಕರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. 
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا