Urdu   /   English   /   Nawayathi

ಆಸ್ಟ್ರೇಲಿಯಾದಲ್ಲಿ ತೆಲಂಗಾಣದ ಮೂವರ ಸಾವು

share with us

ಆಸ್ಟ್ರೇಲಿಯಾ: 19 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಆಸ್ಟ್ರೇಲಿಯಾದ ನ್ಯೂಸೌತ್‌ವೇಲ್ಸ್‌ ಕರಾವಳಿಯ ಮೂನಿ ಬೀಚ್‌ನಲ್ಲಿ ತೆಲಂಗಾಣದ ಮೂವರು ಮುಳುಗಿ ಸಾವಿಗೀಡಾಗಿದ್ದಾರೆ. ಅಪಾಯಕಾರಿ ಕಾಫ್ಸ್‌ ಹಾರ್ಬರ್‌ ಪ್ರದೇಶದಲ್ಲಿ ಆರು ಜನರ ತಂಡ ನೀರಿಗಿಳಿದಿತ್ತು. ಈ ಪೈಕಿ, ಗೌಸುದ್ದೀನ್‌ (45), ರಾಹತ್‌ (35) ಹಾಗೂ ಜುನೈದ್‌ (28) ಸಾವಿಗೀಡಾಗಿದ್ದಾರೆ. ಜುನೈದ್‌ ಅವರ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗೌಸುದ್ದೀನ್‌ ಮತ್ತು ಜುನೈದ್‌ ನಲ್ಗೊಂಡ ಜಿಲ್ಲೆಯವರಾಗಿದ್ದರೆ, ರಾಹತ್‌ ಬಿಎಚ್‌ಇಎಲ್‌ ನಿವಾಸಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇಬ್ಬರು ಬಾಲಕಿಯರು ಮತ್ತು ಬಾಲಕನನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا